ಮುಂಬೈ: ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ; 7 ಸಾವು, 40 ಮಂದಿಗೆ ಗಾಯ

Update: 2023-10-06 15:14 GMT

ಮುಂಬೈ: ಮುಂಬೈಯ ಗೋರೆಗಾಂವ್ ನ ಅಝಾದ್ ನಗರದಲ್ಲಿರುವ ‘ಭವಾನಿ’ ವಸತಿ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಅಪ್ರಾಪ್ತರ ಸಹಿತ 7 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಗ್ನಿ ಅವಘಡ ಸಂಭವಿಸಿದಾಗ ಗಾಯಗೊಂಡವರನ್ನು ಕೂಡಲೇ ಜೋಗೇಶ್ವರಿಯಲ್ಲಿರುವ ಎಚ್ಬಿಟಿ ತುರ್ತು ನಿಗಾ ಕೇಂದ್ರ ಹಾಗೂ ಜುಹುನಲ್ಲಿರುವ ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರ ಸಹಿತ 6 ಮಂದಿ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇನ್ನೋರ್ವ ವ್ಯಕ್ತಿ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

‘ಭವಾನಿ’ ವಸತಿ ಕಟ್ಟಡದಲ್ಲಿ ಬೆಳಗ್ಗೆ 6.45ಕ್ಕೆ ಬೆಂಕಿ ಕಾಣಿಸಿಕೊಂಡಿತು. ಈ ಬೆಂಕಿಯಿಂದ ನೆಲಮಹಡಿಯಲ್ಲಿರುವ ಅಂಗಡಿಗಳು, ಗುಜರಿ ಸಾಮಗ್ರಿಗಳು ಹಾಗೂ ನಿಲ್ಲಿಸಿದ್ದ ವಾಹನಗಳು, ಮೇಲಿನ ಮಹಡಿಗಳಲ್ಲಿನ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದವು. ಬೆಳಗ್ಗೆ 6.45ಕ್ಕೆ ಬೆಂಕಿ ನಂದಿಸಲಾಯಿತು ಮಹಾನಗರ ಪಾಲಿಕೆ ತಿಳಿಸಿದೆ.

ಬೆಂಕಿ ಅವಘಡ ಸಂಭವಿಸಿಲು ಕಾರಣವೇನು ಎಂಬ ಬಗ್ಗೆ ಇದುವರೆಗೆ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ಲಕ್ಷ ಪರಿಹಾರ

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೇ, ತಾನು ನಗರಸಭೆ ಆಯುಕ್ತರು ಹಾಗೂ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ಸರಕಾರ ಚಿಕಿತ್ಸೆ ಒದಗಿಸಲಿದೆ ಎಂದು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News