ದಿಲ್ಲಿ ಮುಖ್ಯಮಂತ್ರಿಯಾಗಿ ಸೆ.21ರಂದು ಅತಿಶಿ ಪ್ರಮಾಣ ವಚನ
Update: 2024-09-19 15:51 IST

ಅತಿಶಿ ಸಿಂಗ್ (Photo: PTI)
ಹೊಸದಿಲ್ಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಸಿಂಗ್ ಸೆ.21ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎಎಪಿ ಪಕ್ಷವು ಗುರುವಾರ ತಿಳಿಸಿದೆ.
ಅತಿಶಿ ಜೊತೆ ಅವರ ಸಂಪುಟ ಸದಸ್ಯರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೇಜ್ರಿವಾಲ್ ಮಂಗಳವಾರ ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲಿ ಅತಿಶಿ ಹೊಸ ಸರ್ಕಾರ ರಚನೆ ಬಗ್ಗೆ ಹಕ್ಕು ಮಂಡಿಸಿದ್ದರು.
ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್ ಬಳಿಕ ದಿಲ್ಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸೆ.26-27ರಂದು ನಡೆಯುವ ಅಧಿವೇಶನದಲ್ಲಿ ಅವರು ಬಹುಮತವನ್ನು ಸಾಬೀತುಪಡಿಸಬೇಕಿದೆ.