ಗಣರಾಜ್ಯೋತ್ಸವ ದಿನಾಚರಣೆ ಪರೇಡ್ ಗೆ ಪಂಜಾಬ್ ಸ್ತಬ್ಧ ಚಿತ್ರ ನಿರಾಕರಣೆ; ಕೇಂದ್ರದ ವಿರುದ್ಧ ಸಿಎಂ ಭಗವಂತ್ ಮಾನ್ ವಾಗ್ದಾಳಿ

Update: 2023-12-28 11:19 GMT

ಭಗವಂತ್ ಮಾನ್ (PTI)

ಚಂಡೀಗಢ: ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ ಗೆ ಪಂಜಾಬ್ ರಾಜ್ಯದ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಾಗ್ದಾಳಿ ನಡೆಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವು ಅದರ ಹೃದಯದಲ್ಲಿ ಪಂಜಾಬ್ ಜನತೆಯ ವಿರುದ್ಧ ಎಷ್ಟು ನಂಜಿದೆ ಎಂಬುದನ್ನು ತೋರಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಮಾನ್, “ಈ ಬಾರಿ ಕೂಡಾ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಂಜಾಬ್ ನ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಲಾಗಿಲ್ಲ. ನಾವು ಮೂರು ವಿಷಯಗಳನ್ನು ಕಳಿಸಿದ್ದೆವು. ಒಂದು ಪಂಜಾಬಿಗಳ ಹುತಾತ್ಮತೆಯ ಚರಿತ್ರೆ, ಎರಡು ಮಾಯಿ ಭಾಗೊ ಜಿಯ ಇತಿಹಾಸ ಹಾಗೂ ಮೂರು ಬೆಲೆ ಕಟ್ಟಲಾಗದ ಪಂಜಾಬಿನ ಪರಂಪರೆ” ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹರ್ಜೀತ್ ಗ್ರೇವಾಲ್, ಮಾನದಂಡಗಳಿಗೆ ಸರಿ ಹೊಂದದ ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ ಗೆ ಪಂಜಾಬ್, ದಿಲ್ಲಿ ಹಾಗೂ ಹಿಮಾಚಲ ಪ್ರದೇಶದ ಸ್ತಬ್ಧ ಚಿತ್ರಗಳನ್ನು ನಿರಾಕರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News