ಬಹುಪತ್ನಿತ್ವ ತಕ್ಷಣದಿಂದ ನಿಷೇಧಕ್ಕೆ ಮಸೂದೆ: ಅಸ್ಸಾಂ ಮುಖ್ಯಮಂತ್ರಿ

Update: 2023-07-14 06:19 GMT

ಗುವಾಹತಿ: ಬಹುಪತ್ನಿತ್ವವನ್ನು ನಿಷೇಧಿಸುವ ಮೂಲಕ ಸಮಾನ ನಾಗರಿಕ ಸಂಹಿತೆಯ ಒಂದು ಭಾಗವನ್ನು ತಕ್ಷಣದಿಂದ ಜಾರಿಗೊಳಿಸಲು ತಮ್ಮ ಸರ್ಕಾರ ಬಯಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಪ್ರಕಟಿಸಿದ್ದಾರೆ. ಈ ಸಂಬಂಧ ಶೀಘ್ರವೇ ವಿಧಾನಸಭೆಯಲ್ಲಿ ಮಸೂದೆ ಮಂಡಿಸುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನಾಲ್ಕು ಮಂದಿ ತಜ್ಞರ ಸಮಿತಿಯನ್ನು ರಚಿಸಿದ ಅಸ್ಸಾಂ ಸರ್ಕಾರ, ರಾಜ್ಯ ಕಾನೂನಿನ ಮೂಲಕ ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಬಹುದೇ ಎಂಬ ಬಗ್ಗೆ ಅಧ್ಯಯನ ಮಾಡಿ, 60 ದಿನಗಳ ಒಳಗಾಗಿ ವರದಿ ಸಲ್ಲಿಸಲು ಗುವಾಹತಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ರುಮಿ ಫುಕಾನ್ ನೇತೃತ್ವದ ಸಮಿತಿಗೆ ಸೂಚಿಸಿತ್ತು.

ಯುಸಿಸಿಗೆ ಮುನ್ನ ಸಮಿತಿ ತನ್ನ ವರದಿಯನ್ನು ಸಲ್ಲಿಸಿದರೆ, ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸಲು ಸೆಪ್ಟೆಂಬರ್ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಲು ನಾವು ಬಯಸಿದ್ದೇವೆ. ಯಾವುದಾದರೂ ಕಾರಣದಿಂದ ಸೆಪ್ಟೆಂಬರ್ನಲ್ಲಿ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಇದನ್ನು ಜನವರಿ ಅಧಿವೇಶನಲ್ಲಿ ಮಾಡುತ್ತೇವೆ" ಎಂದು ಶರ್ಮಾ ವಿವರಿಸಿದರು.

ಈ ಮಧ್ಯೆ ಯುಸಿಸಿ ಜಾರಿಯಾದಲ್ಲಿ, ಬಹುಪತ್ನಿತ್ವವನ್ನು ನಿಷೇಧಿಸಲು ಕ್ರಮ ಕೈಗೊಳ್ಳುವ ಅಗತ್ಯ ಬರುವುದಿಲ್ಲ" ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News