ಆಹಾರದಲ್ಲಿ ಸತ್ತ ಇಲಿ ಪತ್ತೆ: ಖ್ಯಾತ ರೆಸ್ಟೋರೆಂಟ್ ನ ಬಾಣಸಿಗ ಸೇರಿ ಇಬ್ಬರ ಬಂಧನ

Update: 2023-08-17 15:32 GMT

ಮುಂಬೈ: ಆಗಸ್ಟ್ 13ರ ರಾತ್ರಿ ನನ್ನ ಆಹಾರದಲ್ಲಿ ಸತ್ತ ಇಲ್ಲಿ ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರ ನೀಡಿದ್ದ ದೂರನ್ನು ಆಧರಿಸಿ, ಸೋಮವಾರ ಪೊಲೀಸರು ಬಾಂದ್ರಾದ ಪ್ರಸಿದ್ಧ ರೆಸ್ಟೋರೆಂಟ್ ಒಂದರ ವ್ಯವಸ್ಥಾಪಕ ಹಾಗೂ ಬಾಣಸಿಗನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಬಾಂದ್ರಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಪ್ರಕಾರ, ಆಗಸ್ಟ್ 13ರಂದು 40 ವರ್ಷದ ಅನುರಾಗ್ ದಿಲೀಪ್ ಸಿಂಗ್ ಎಂಬವರು ಬಾಂದ್ರಾ ಪೂರ್ವದ ಪಾಲಿ ನಾಕಾದಲ್ಲಿರುವ ಪಾಪಾ ಪಾಂಚೊ ದಾ ಧಾಬಾಗೆ ತಮ್ಮ ಗೆಳೆಯ ಅಮೀನ್ ಖಾನ್ (40) ಎಂಬವರೊಂದಿಗೆ ಊಟಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿ ‘ಭುನಾ ಗೋಷ್ತ್’ ಹಾಗೂ ‘ಚಿಕನ್ ಧಾಬಾ’ಗೆ ಆರ್ಡರ್ ಮಾಡಿದ್ದಾರೆ. ಅವರದನ್ನು ಸೇವಿಸುವಾಗ ಚಿಕನ್ ಖಾದ್ಯದಲ್ಲಿ ಸಿಂಗ್ ಅಸಹಜ ತುಂಡೊಂದನ್ನು ಗಮನಿಸಿದ್ದಾರೆ. ಅವರದನ್ನು ಎಚ್ಚರಿಕೆಯಿಂದ ಪರೀಕ್ಷಿಸಿದ ನಂತರ ಅದರಲ್ಲಿ ಸತ್ತ ಇಲಿಯನ್ನು ಕಂಡು ಆಘಾತಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಂತರ ಹೋಟೆಲ್ ವ್ಯವಸ್ಥಾಪಕ ವಿವಿಯನ್ ಆಲ್ಬರ್ಟ್ ಸಿಕ್ವೇರಾ (40) ಅವರಿಗೆ ಇಲಿಯನ್ನು ತೋರಿಸಿ ವಾಗ್ವಾದಕ್ಕಿಳಿದಿದ್ದಾರೆ. ಇದಾದ ನಂತರ ಸಿಂಗ್ ಅವರ ಗೆಳೆಯ ಖಾನ್ ಈ ಘಟನೆಯ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿ, ಆಹಾರದಲ್ಲಿ ಸತ್ತ ಇಲಿ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಬಾಂದ್ರಾ ಪೊಲೀಸರು ರೆಸ್ಟೋರೆಂಟ್ ವ್ಯವಸ್ಥಾಪಕ ಸಿಕ್ವೇರಾ ಹಾಗೂ ರೆಸ್ಟೋರೆಂಟ್ ಗೆ ರವಿವಾರ ಬೆಳಗ್ಗೆ ಉಪ್ಪಿನಕಾಯಿಗಳು ಹಾಗೂ ಚಿಕನ್ ಪೂರೈಸಿದ್ದ ಸರಬರಾಜುದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News