ಅತ್ಯಂತ ಹೆಚ್ಚಿನ ಶತಕೋಟ್ಯಧಿಪತಿ ಸಂಸದರು ಇರುವ ರಾಜ್ಯ ಯಾವುದು ಗೊತ್ತೇ?

Update: 2023-09-15 17:00 GMT

ಹೈದರಾಬಾದ್: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಕೋಟ್ಯಧಿಪತಿ ಸಂಸದರು ತೆಲಂಗಾಣಕ್ಕೆ ಸೇರಿದವರಾಗಿದ್ದು, ಆಂಧ್ರಪ್ರದೇಶವು ಎರಡನೇ ಸ್ಥಾನದಲ್ಲಿದೆ.

ಸಂಸತ್ತಿನ ಉಭಯ ಸದನಗಳ ಒಟ್ಟು 776 ಸ್ಥಾನಗಳ ಪೈಕಿ 763 ಹಾಲಿ ಸಂಸದರ ಆಸ್ತಿಗಳ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಇಲೆಕ್ಷನ್ ವಾಚ್ ನ ವಿಶ್ಲೇಷಣಾ ವರದಿಯಂತೆ ತೆಲಂಗಾಣ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶತಕೋಟ್ಯಧಿಪತಿ ಸಂಸದರನ್ನು ಹೊಂದಿದೆ.

ತೆಲಂಗಾಣದ 24 ಸಂಸದರ ಒಟ್ಟು ಆಸ್ತಿಗಳ ಮೌಲ್ಯ 6,294 ಕೋಟಿ ರೂ.ಗಳಾಗಿದ್ದರೆ, ನೆರೆಯ ಆಂಧ್ರಪ್ರದೇಶದ 36 ಸಂಸದರ ಒಟ್ಟು ಆಸ್ತಿಗಳ ಮೌಲ್ಯ 5,427 ಕೋಟಿ ರೂ.ಗಳಾಗಿವೆ.

ತೆಲಂಗಾಣದ ಬಿಆರ್ ಎಸ್ ಸಂಸದ ಬಂಡಿ ಪಾರ್ಥಸಾರಥಿ ರೆಡ್ಡಿ 5,300 ಕೋಟಿ ರೂ.ಗಳ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ.

ಆಂಧ್ರಪ್ರದೇಶದ ವೈಎಸ್ಆರ್ಸಿಪಿ ಸಂಸದ ಆಳ್ಲ ಅಯೋಧ್ಯಾ ರಾಮಿ ರೆಡ್ಡಿ ಅವರು 2,577 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ.

ಪಕ್ಷವಾರು ಶತಕೋಟ್ಯಧಿಪತಿ ಸಂಸದರು:

BRSನ 16 ಸಂಸದರ ಪೈಕಿ ಏಳು (ಶೇ.44) ಸಂಸದರು ಮತ್ತು ವೈಎಸ್ಆರ್ಸಿಪಿಯ 31 ಸಂಸದರ ಪೈಕಿ ಏಳು (ಶೇ.23) ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ. ಕಾಂಗ್ರೆಸ್ ನ 81 ಸಂಸದರ ಪೈಕಿ ಆರು (ಶೇ.7) ಮತ್ತು ಬಿಜೆಪಿಯ 385 ಸಂಸದರ ಪೈಕಿ 14 (ಶೇ.4) ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ.

16 BRS ಸಂಸದರು ಸರಾಸರಿ 383 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದರೆ ವೈಎಸ್ಆರ್ಸಿಪಿಯ 31 ಸಂಸದರ ಆಸ್ತಿ ಮೌಲ್ಯ ಸರಾಸರಿ 153 ಕೋಟಿ ರೂ.ಗಳಾಗಿವೆ. ದೇಶದಲ್ಲಿಯ 763 ಹಾಲಿ ಸಂಸದರು ಒಟ್ಟು 29,251 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News