ರದ್ದಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು ಎಂದ ಕಂಗನಾ

Update: 2024-09-25 06:07 GMT

PC: ಕಂಗನಾ ರಣಾವತ್

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ನಾಯಕಿ ಹಾಗೂ ಮಂಡಿ ಸಂಸದೆ ಕಂಗನಾ ರಣಾವತ್ ಅವರು ಮೂರು ಕೃಷಿ ಕಾನೂನುಗಳ ಸಂಬಂಧ ನೀಡಿದ ಹೇಳಿಕೆಯನ್ನು ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವೇ ಅಲ್ಲಗಳೆದಿದೆ.

"ಕಂಗನಾ ರಾವತ್ ವಿಡಿಯೊ ವೈರಲ್ ಆಗಿದೆ. ಕೃಷಿ ಕಾನೂನುಗಳ ಬಗ್ಗೆ ಅವರು ಹಾಗೆ ಮಾತನಾಡಬಾರದಿತ್ತು. ಪಕ್ಷದ ಪರವಾಗಿ ಮಾತನಾಡುವ ಅಧಿಕಾರ ಅವರಿಗಿಲ್ಲ. ಅವರ ಅಭಿಪ್ರಾಯಗಳು ವೈಯಕ್ತಿಕ. ಈ ವಿಚಾರದಲ್ಲಿ ಪಕ್ಷದ ನಿಲುವು ಅಲ್ಲ" ಎಂದು ಪಕ್ಷದ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಅವರ ಹೇಳಿಕೆಯನ್ನು ನಿರಾಕರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಪ್ರತಿಭಟನೆ ಬಳಿಕ ರದ್ದುಪಡಿಸಲಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು ಎಂದು ಹೇಳಿಕೆ ನೀಡುವ ಮೂಲಕ ಕಂಗನಾ ರಣಾವತ್ ರೈತರ ಕೆಂಗಣ್ಣಿಗೆ ಗುರಿಯಾಗಿದ್ದರು. "ಈ ಹೇಳಿಕೆ ವಿವಾದಾತ್ಮಕ ಎನ್ನುವುದು ನನಗೆ ಗೊತ್ತು, ಆದರೆ ಆದರೆ ಮೂರು ಕೃಷಿ ಕಾನೂನುಗಳನ್ನು ವಾಪಾಸು ಜಾರಿಗೊಳಿಸಲೇಬೇಕು. ರೈತರು ಸ್ವತಃ ತಾವೇ ಈ ಬೇಡಿಕೆ ಮುಂದಿಡಬೇಕು" ಎಂದು ಕಂಗನಾ ಹೇಳಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News