ಉತ್ತರಪ್ರದೇಶ | ಮಾಲೀಕರ, ನಿರ್ವಾಹಕರ ಹೆಸರು, ವಿಳಾಸ ಪ್ರದರ್ಶಿಸಿ ; ಆಹಾರ ಮಳಿಗೆಗಳಿಗೆ ಸಿಎಂ ಸೂಚನೆ

Update: 2024-09-24 16:57 GMT

 ಆದಿತ್ಯನಾಥ್ | PC : PTI 

ಲಕ್ನೋ : ಉತ್ತರಪ್ರದೇಶದಾದ್ಯಂತ ಇರುವ ಎಲ್ಲಾ ಆಹಾರ ಅಂಗಡಿಗಳಲ್ಲಿ ಮಾಲೀಕರ, ನಡೆಸುವವರ ಮತ್ತು ನಿರ್ವಾಹಕರ ಹೆಸರುಗಳು ಮತ್ತು ವಿಳಾಸಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳವಾರ ಸೂಚನೆ ನೀಡಿದ್ದಾರೆ.

ಅದೂ ಅಲ್ಲದೆ, ಎಲ್ಲಾ ಆಹಾರ ಅಂಗಡಿಗಳ ಅಡುಗೆಯವರು ಮತ್ತು ಮಾಣಿ (ವೇಟರ್)ಗಳು ಮುಖಗವಸು ಮತ್ತು ಕೈಗವಸುಗಳನ್ನು ಧರಿಸಬೇಕು ಮತ್ತು ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಹಾಕಬೇಕು ಎಂಬುದಾಗಿಯೂ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಆಹಾರ ಮಾಲಿನ್ಯದ ಹಲವು ಘಟನೆಗಳು ಬೆಳಕಿಗೆ ಬಂದ ಬಳಿಕ ರಾಜ್ಯ ಸರಕಾರವು ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಟೇಲ್‌ಗಳು, ದಾಬಾಗಳು ಮತ್ತು ರೆಸ್ಟೊರೆಂಟ್‌ಗಳು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಆಹಾರ ಅಂಗಡಿಗಳ ಸಮಗ್ರ ತಪಾಸಣೆ ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ, ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಎಲ್ಲಾ ಆಹಾರ ಅಂಗಡಿಗಳು ತಮ್ಮ ಮಾಲೀಕರು ಮತ್ತು ಸಿಬ್ಬಂದಿಯ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಅಂಗಡಿಯ ಎದುರು ದೊಡ್ಡದಾಗಿ ಪ್ರದರ್ಶಿಸಬೇಕು ಎಂಬ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News