ಚುನಾವಣೋತ್ತರ ಸಮೀಕ್ಷೆ | ಹರಿಯಾಣ – ಕಾಶ್ಮೀರದಲ್ಲಿ ಕಾಂಗ್ರೆಸ್ ʼಕೈʼಹಿಡಿದ ಮತದಾರ

Update: 2024-10-05 13:57 GMT

ಸಾಂದರ್ಭಿಕ ಚಿತ್ರ |PTI 

ಸದಿಲ್ಲಿ : ಹರಿಯಾಣದಲ್ಲಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಹೊರಬಂದಿದ್ದು, ಹರಿಯಾಣ ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಗೆ ಬಹುಮತ ಬರಲಿದೆ ಸಮೀಕ್ಷೆಗಳು ಮುನ್ಸೂಚನೆ ನೀಡಿವೆ.

ಹರಿಯಾಣದ ರಾಜಕೀಯ ಅಖಾಡದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಗೆ ಬಹುಮತ ನೀಡಿವೆ. 90 ವಿಧಾನ ಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ ಬಹುಮತಕ್ಕೆ 46 ಸ್ಥಾನಗಳು ಗೆಲ್ಲಬೇಕು.

ಪೀಪಲ್ಸ್ ಪಲ್ಸ್ ಸಮೀಕ್ಷೆಯು ಹರಿಯಾಣದಲ್ಲಿ ಬಿಜೆಪಿಗೆ 20-32 ಸ್ಥಾನಗಳು, ಕಾಂಗ್ರೆಸ್ ಗೆ 49-61 ಸ್ಥಾನಗಳು, ಇತರರಿಗೆ 3-5 ಸ್ಥಾನಗಳು ಬರಬಹುದು ಎಂದು ಭವಿಷ್ಯ ನುಡಿದಿದೆ.

ಧ್ರುವ್ ರಿಸರ್ಚ್ ಚುನಾವಣೋತ್ತರ ಸಮೀಕ್ಷೆಯು ಹರಿಯಾಣದಲ್ಲಿ ಬಿಜೆಪಿ 22-32 ಸ್ಥಾನಗಳನ್ನು ಗಳಿಸಲಿದೆ, ಕಾಂಗ್ರೆಸ್ 50-62 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

NDTV ಸಮೀಕ್ಷೆಯ ಪ್ರಕಾರ ಹರಿಯಾಣದಲ್ಲಿ ಬಿಜೆಪಿಗೆ 20-32, ಕಾಂಗ್ರೆಸ್ಗೆ 49-61 ಸ್ಥಾನಗಳು ಬರಲಿದೆ ಎಂದು ಹೇಳಿದೆ.

ದೈನಿಕ್ ಭಾಸ್ಕರ್ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್‌ಗೆ 44-54 ಸ್ಥಾನಗಳು ಬರುವ ಭವಿಷ್ಯ ನುಡಿದಿವೆ.

ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ - ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳು ಬರಲಿದೆ ಎಂದು ಸಮೀಕ್ಷೆಗಳು ಹೇಳಿದೆ. 

ದೈನಿಕ್‌ ಭಾಸ್ಕರ್‌ ಸಮೀಕ್ಷೆಯು ಬಿಜೆಪಿಗೆ 20-25 ಸ್ಥಾನಗಳು, ಕಾಂಗ್ರೆಸ್‌ ಮೈತ್ರಿಕೂಟಕ್ಕೆ 35-40 ಸ್ಥಾನಗಳು, ಪಿಡಿಪಿಗೆ 4-7 ಸ್ಥಾನಗಳು, ಇತರರಿಗೆ 12-16 ಸ್ಥಾನಗಳು ಬರಲಿದೆ ಎಂದು ಭವಿಷ್ಯ ನುಡಿದಿದೆ.

ಇಂಡಿಯಾ ಟುಡೆ - ಸಿ ವೋಟರ್‌ ಸಮೀಕ್ಷೆಯು ಬಿಜೆಪಿಗೆ 27-32 ಸ್ಥಾನಗಳು ಬರಬಹುದು ಎಂದು ಹೇಳಿದೆ. ಕಾಂಗ್ರೆಸ್‌ ಮೈತ್ರಿಕೂಟವು 40-48 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಪಿಡಿಗೆ 6-12, ಇತರರಿಗೆ 6-11 ಸ್ಥಾನಗಳು ಬರಬಹುದು ಎಂದು ಸಮೀಕ್ಷೆಯಲ್ಲಿ ಹೇಳಿದೆ.

ಪೀಪಲ್ಸ್‌ ಪಲ್ಸ್‌ 23-27 ಸ್ಥಾನಗಳನ್ನು ಬಿಜೆಪಿಗೆ ಸಮೀಕ್ಷೆಯಲ್ಲಿ ನೀಡಿದೆ. ಕಾಂಗ್ರೆಸ್‌ ಮೈತ್ರಿಗೆ 46-50  ಸ್ಥಾನಗಳು ಹಾಗೂ ಪಿಡಿಪಿ 7-11, ಇತರರು 4-6 ಸ್ಥಾನಗಳು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ. 




Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News