ಸಂಸದರ ಗ್ರೂಪ್ ಫೊಟೋ ತೆಗೆಯಲು ಸಿದ್ಧತೆ: ಇದೇ ಕೊನೆ ಅಧಿವೇಶನ?

Update: 2023-09-01 13:04 GMT

Photo: PTI 

ಹೊಸದಿಲ್ಲಿ: ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 22 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರ ಗುಂಪು ಫೋಟೋ ತೆಗೆಯಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು PTI ವರದಿ ಮಾಡಿದೆ.

ಹಾಗಾಗಿ, ಈ ಅಧಿವೇಶನವು ಪ್ರಸ್ತುತ ಸಂಸತ್ತಿನ ಕೊನೆಯ ಅಧಿವೇಶನವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಆ ಬಗ್ಗೆ ಯಾವುದೇ ಧೃಡೀಕರಣ ಇನ್ನೂ ಸಿಕ್ಕಿಲ್ಲ.

ಸಂಸದರ ಗುಂಪು ಛಾಯಾಚಿತ್ರಗಳನ್ನು ಸಾಮಾನ್ಯವಾಗಿ ಸಂಸದರ ಅಧಿಕಾರವಧಿಯ ಆರಂಭದಲ್ಲಿ ಮತ್ತು ಕೊನೆಯಲ್ಲಿ ತೆಗೆದುಕೊಳ್ಳಲಾಗುತ್ತದೆ.

ವಿಶೇಷ ಅಧಿವೇಶನಕ್ಕೆ ಸರ್ಕಾರ ತನ್ನ ಕಾರ್ಯಸೂಚಿಯನ್ನು ವಿವರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News