ಹೋಟೆಲ್‌ ನಲ್ಲಿ ಬೆಂಕಿ ಅವಘಢ ಸಂಭವಿಸಿದ್ದನ್ನು ಹಿಂದೂ ದೇವಳಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಸುದ್ದಿ ಹರಡಿದ News24, Zee News

Update: 2024-08-08 09:31 GMT

ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನಗೈದ ನಂತರ ಹಾಗೂ ಅಲ್ಲಿನ ಆಡಳಿತವನ್ನು ಮಿಲಿಟರಿ ವಹಿಸಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಲೂಟಿ ಹಾಗೂ ಹಿಂಸಾಚಾರದ ನೂರಾರು ವೀಡಿಯೋಗಳು ಹರಿದಾಡುತ್ತಿವೆ.

ಇಂತಹ ಒಂದು ವೀಡಿಯೋದಲ್ಲಿ ಕಟ್ಟಡವೊಂದು ಬೆಂಕಿಗಾಹುತಿಯಾಗುತ್ತಿರುವುದು ಕಾಣಿಸುತ್ತಿದೆ ಹಾಗೂ "ಮುಸ್ಲಿಂ ಮೂಲಭೂತವಾದಿಗಳು ಹಿಂದು ದೇವಳಕ್ಕೆ ಬೆಂಕಿ ಹಚ್ಚಿದ್ದಾರೆ" ಎಂಬ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.

ಇದೇ ಸುಳ್ಳು ಸುದ್ದಿಯನ್ನು ನ್ಯೂಸ್‌24 ಮತ್ತು ಝೀ ನ್ಯೂಸ್‌ ಮಧ್ಯ ಪ್ರದೇಶ ಮತ್ತು ಛತ್ತೀಸಗಢ ಪ್ರಸಾರ ಮಾಡಿ ಹಿಂದೂ ದೇವಳಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿವೆ.

ಬಾಂಗ್ಲಾದೇಶದ ಫ್ಯಾಕ್ಟ್‌ ಚೆಕರ್ ಸೊಹನೂರ್‌ ರಹಮಾನ್‌ ಈ ಕುರಿತು ಪರಿಶೀಲಿಸಿ ಬೆಂಕಿ ಹಚ್ಚಲಾದ ಕಟ್ಟಡವು ಬಾಂಗ್ಲಾದೇಶದ ಸತ್ಖಿರಾ ಎಂಬಲ್ಲಿರುವ ರಾಜ್‌ ಪ್ಯಾಲೇಸ್‌ ಕಾಫಿ ಶಾಪ್‌ ಮತ್ತು ರೆಸ್ಟೋರೆಂಟ್‌ನದ್ದಾಗಿದೆ, ದೇವಳದ್ದಲ್ಲ ಎಂದಿದ್ದಾರೆ. ಫೇಸ್ಬುಕ್‌ ಪುಟ ಕಲರೋವಾ ಸ್ಪೇಜ್‌ ಮತ್ತು ಗೂಗಲ್‌ ಮ್ಯಾಪ್‌ ಇಮೇಜ್‌ಗಳಿಂದಲೂ ಇದು ದೃಢಪಟ್ಟಿದೆ ಎಂದು Alt News ವರದಿ ಮಾಡಿದೆ.

ಇದರ ಹೊರತಾಗಿಯೂ ಸುನಂದಾ ರಾಯ್‌, ಹಿಂದು ವಾಯ್ಸ್‌, ರಾಂಡಮ್‌ ಸೇನಾ ಮುಂತಾದ ಸಾಮಾಜಿಕ ಜಾಲತಾಣ ಖಾತೆಗಳು ಇನ್ನೂ ಸುಳ್ಳು ಮಾಹಿತಿಯನ್ನೇ ಹರಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News