ರಾಜಸ್ಥಾನ | 10 ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಬೋರ್ ವೆಲ್ ನಿಂದ ಹೊರತೆಗೆದ 3 ವರ್ಷದ ಬಾಲಕಿ ಮೃತ್ಯು
Update: 2025-01-01 15:41 GMT
ಜೈಪುರ: ರಾಜಸ್ಥಾನದ ಕೊಟ್ ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ 150 ಅಡಿ ಆಳದ ಬೋರ್ ವೆಲ್ ನಿಂದ 10 ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಹೊರತೆಗೆದ 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ರಕ್ಷಣಾ ಕಾರ್ಯಾಚರಣೆಯ ನಂತರ ಬುಧವಾರ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊರ ತೆಗೆದು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಾಲಕಿ ಚೇತನಾ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದರು.
ಎನ್ಡಿಆರ್ ಎಫ್ ತಂಡದ ಉಸ್ತುವಾರಿ ಯೋಗೇಶ್ ಮೀನಾ ಮಾತನಾಡಿ, ಬಾಲಕಿಯನ್ನು ಹೊರಗೆ ತೆಗೆದಾಗ ಆಕೆಯ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ ಎಂದು ಹೇಳಿದ್ದಾರೆ.