ರಾಜಸ್ಥಾನ | ಬೋರ್ ವೆಲ್ ನಲ್ಲಿ ಸಿಲುಕಿದ್ದ ಮೂರು ವರ್ಷದ ಬಾಲಕಿಯನ್ನು 10 ದಿನಗಳ ಕಾರ್ಯಾಚರಣೆ ಬಳಿಕ ರಕ್ಷಣೆ

Update: 2025-01-01 14:36 GMT

Photo | PTI

ಜೈಪುರ: ಡಿಸೆಂಬರ್ 23ರಂದು ರಾಜಸ್ಥಾನದ ಕೋಟ್ ಪುಟ್ಲಿಯಲ್ಲಿ ಬೋರ್ ವೆಲ್ ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಸತತ ಕಾರ್ಯಾಚರಣೆಯ ಬಳಿಕ ಅಂತಿಮವಾಗಿ ಅಧಿಕಾರಿಗಳು ಬುಧವಾರ ರಕ್ಷಿಸಿದ್ದು,  ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಬೋರ್‌ವೆಲ್‌ನಿಂದ ಹೊರತೆಗೆದ ಚೇತನಾಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

ರಾಜಸ್ಥಾನದ ಕೊಟ್ಪುಟ್ಲಿಯಲ್ಲಿ 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಚೇತನಾ 120 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಬಾಲಕಿಯ ರಕ್ಷಣೆಗೆ ಎನ್‌ ಡಿಆರ್‌ ಎಫ್, ಎಸ್‌ ಡಿಆರ್‌ ಎಫ್ ತಂಡಗಳು ಸತತ 9 ದಿನಗಳಿಂದ ಕಾರ್ಯಾಚರಣೆಯನ್ನು ನಡೆಸಿತ್ತು.

ಕೊಟ್ ಪುಟ್ಲಿಯಲ್ಲಿ 150 ಅಡಿ ಆಳದ ಬೋರ್ ವೆಲ್ ನಿಂದ ಬಾಲಕಿಯನ್ನು ಹೊರತೆಗೆಯುವ ಈ ಕಾರ್ಯಚರಣೆಯು ರಾಜಸ್ಥಾನದ ಸುದೀರ್ಘ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಸುದೀರ್ಘವಾದ ಕಾರ್ಯಾಚರಣೆಯ ಮೂಲಕ ಬಾಲಕಿಯನ್ನು ಬೋರ್ ವೆಲ್ ನಿಂದ ಹೊರಗೆ ತೆಗೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News