ಬಜೆಟ್ ಯುವ ಭಾರತವನ್ನು ಪ್ರತಿಫಲಿಸಿದೆ: ಮಧ್ಯಂತರ ಬಜೆಟ್ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ

Update: 2024-02-01 09:20 GMT

Photo: ndtv

ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ‘ಸಿಹಿ ತಾಣʻಕ್ಕೆ ತಲುಪಿಸಿದೆ ಎಂದು ಬಣ್ಣಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ ಒದಗಿಸದೆ, ಅಗಣಿತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಶ್ಲಾಘಿಸಿದರು.

ಬಜೆಟ್ ಯುವಕರ ಯುವ ಭಾರತವನ್ನು ಪ್ರತಿಫಲಿಸಿದೆ ಎಂದು ಪ್ರತಿಪಾದಿಸಿದ ಅವರು, ಈ ದಿಕ್ಕಿನಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ರೂ. ಒಂದು ಲಕ್ಷ ಕೋಟಿ ನಿಧಿ ಹಾಗೂ ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News