ಟೆಂಡರ್ ಹಗರಣ: ಹಿರಿಯ ಐಎಎಸ್ ಅಧಿಕಾರಿ, ಆರ್ ಜೆಡಿ ಮಾಜಿ ಶಾಸಕ ಬಂಧನ

Update: 2024-10-19 02:41 GMT

PC: x.com/ShivaniV2901

ಪಾಟ್ನಾ: ಬಿಹಾರ ವಿದ್ಯುತ್ ಸಚಿವಾಲಯದಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಅವ್ಯವಹಾರ ಪ್ರಕರಣಕ್ಕೆ ಸಬಂಧಿಸಿದಂತೆ ಬಿಹಾರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಮತ್ತು ಆರ್ಜೆಡಿಯ ಮಾಜಿ ಶಾಸಕರೊಬ್ಬರನ್ನು ಕಾನೂನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಬಿಹಾರ ಕೇಡರ್ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ರಾಜ್ಯ ವಿದ್ಯುತ್ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಜಾರಿ ನಿರ್ದೇಶನಾಲಯ ಅವರ ನಿವಾಸದ ಮೇಲೆ ಮೊದಲು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಅವರನ್ನು ಆ ಬಳಿಕ ಸಾಮಾನ್ಯ ಆಡಳಿತ ವಿಭಾಗಕ್ಕೆ ಆಗಸ್ಟ್ನಲ್ಲಿ ವರ್ಗಾಯಿಸಲಾಗಿತ್ತು. ಝಂಜಾರ್ಪುರ ಮಾಜಿ ಶಾಸಕ ಗುಲಾಬ್ ಯಾದವ್, ಹನ್ಸ್ ಅವರ ನಿಕಟವರ್ತಿ ಎಂದು ಮೂಲಗಳು ಹೇಳಿವೆ.

ಹನ್ಸ್ ಹಾಗೂ ಯಾದವ್ ಅವರಿಗೆ ಸೇರಿದ ಹಲವು ಆಸ್ತಿಗಳ ಮೇಲೆ ಗುರುವಾರ ಕೊನೆಯ ಸುತ್ತಿನ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಶುಕ್ರವಾರ ಪಾಟ್ನಾದಲ್ಲಿ ಹನ್ಸ್ ಅವರನ್ನು ಬಂಧಿಸಿದ್ದರೆ, ಯಾದವ್ ಅವರನ್ನು ಹಣ ದುರ್ಬಳಕೆ ಕಾಯ್ದೆಯಡಿ ದೆಹಲಿಯಲ್ಲಿ ಬಂಧಿಸಲಾಗಿದೆ.

ಬಿಹಾರ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದಲ್ಲಿ ಹಣ ದುರುಪಯೋಗ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಉದ್ಯೋಗ ಕೊಡಿಸಲು ನೆರವಾಗುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಹನ್ಸ್ ಮೇಲಿತ್ತು. ಆದರೆ ಪಾಟ್ನಾ ಹೈಕೋರ್ಟ್ ಕಳೆದ ಆಗಸ್ಟ್ನಲ್ಲಿ ಈ ಪ್ರಕರಣವನ್ನು ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News