ಸಂಸತ್ತಿನೊಳಗೆ ಅಪರಿಚಿತರು ನುಗ್ಗಿದ ಬೆನ್ನಿಗೇ ಪ್ರಧಾನಿ ಮೋದಿಯನ್ನು ಪ್ರಶಂಸಿಸುವ ವೀಡಿಯೊ ಟ್ವೀಟ್ ಮಾಡಿದ ಬಿಜೆಪಿ

Update: 2023-12-13 13:33 GMT

Photo : PTI

ಹೊಸದಿಲ್ಲಿ : 9 ಜನರ ಸಾವಿಗೆ ಕಾರಣವಾಗಿದ್ದ 2001ರ ಸಂಸತ್ ಮೇಲಿನ ದಾಳಿಗೆ 22 ವರ್ಷ ತುಂಬುವ ದಿನದಂದೇ ನೂತನ ಸಂಸತ್ ಭವನ ಭಾರೀ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ . ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನ ಒಮ್ಮೆಲೇ ಹೊಗೆ ಕಂಡು ಸಂಸದರೆಲ್ಲರೂ ಒಮ್ಮೆಲೇ ಆಘಾತಕ್ಕೊಳಗಾದರು. ಪ್ರೇಕ್ಷಕರ ಗ್ಯಾಲರಿಯಿಂದ ಕೆಳಗೆ ಹಾರಿದ ಇಬ್ಬರು, ಹಳದಿ ಬಣ್ಣದ ಹೊಗೆ ಎರಚಿ ಆತಂಕ ಸೃಷ್ಟಿಸಿದರು. ಒಬ್ಬ ಸಂಸದರು ಕುಳಿತುಕೊಳ್ಳುವ ಮೇಜುಗಳ ಮೇಲೆಯೇ ಓಡುವ ದೃಶ್ಯ ಲೋಕಸಭೆಯ ಕಲಾಪದ ವೀಡಿಯೊದಲ್ಲಿ ದಾಖಲಾಗಿದೆ.

ಸಂಸತ್ತಿನೊಳಗೆ ಆತಂಕ ಸೃಷ್ಟಿಸಿದ ಆರೋಪಿಗಳು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪಾಸ್‌ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಘಟನೆಯ ಬಗ್ಗೆ ಬಿಜೆಪಿಯ ಟ್ವಿಟರ್‌ ಹ್ಯಾಂಡಲ್‌ ಕಡೆಯಿಂದ ಯಾವುದೇ ಟ್ವೀಟ್‌ ಇದುವರೆಗೂ ಬಂದಿಲ್ಲ. ಬದಲಾಗಿ ಪ್ರಧಾನಿ ಮೋದಿಯನ್ನು ಹೊಗಳುವ ವೀಡಿಯೊ ಇರುವ ಟ್ವೀಟ್‌ ಒಂದನ್ನು ಮಾಡಲಾಗಿದೆ. “ಒಬ್ಬ ಏಕಾಂಗಿ ಎಲ್ಲರನ್ನೂ ಮೀರಿಸಬಲ್ಲ” ಎಂದು ಮೋದಿ ಬಗ್ಗೆ ಹೊಗಳಿ ವಿವರಿಸಿರುವ ವೀಡಿಯೊ ಇರುವ ಟ್ವೀಟ್‌ ಅದು.

ವೈರಸ್‌ ಬಾಬ ಇಂಡಿಯಾ ವಾಲಾ @Virus_Studioz ಎನ್ನುವ ಬಳಕೆದಾರರು, ಒಬ್ಬ ಭ್ರಷ್ಟವ್ಯಕ್ತಿ ಇತರ ಭ್ರಷ್ಟ ವ್ಯಕ್ತಿಗಳಿಗಿಂತ ಮೇಲು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಕರ್‌ ಸಿಂಗ್‌ ಪರಿಹಾರ್ @IPrabhakarSP ಎನ್ನುವ ಬಳಕೆದಾರರು ಸಂಸತ್ತಿನ ಮೇಲಿನ ದಾಳಿಗೆ ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆಯ ಬಗ್ಗೆ ಇದುವರೆಗೂ ಪ್ರದಾನ ಮಂತ್ರಿ ನರೇಂದ್ರ ಮೋದಿಯವರೂ ಯಾವುದೇ ಟ್ವೀಟ್‌ ಮಾಡಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದಲೂ ಯಾವುದೇ ಹೇಳಿಕೆ ಬಂದಿಲ್ಲ.

ಪಾಸ್‌ ನೀಡಿರುವ ಪ್ರತಾಪ್‌ ಸಿಂಹ ಅವರೂ ಯಾವುದೇ ಟ್ವೀಟ್‌ ಮಾಡಿಲ್ಲ, ಹೇಳಿಕೆ ನೀಡಿಲ್ಲ.

Photo : x/@narendramodi

 

Photo : x/@mepratap

Photo : x/@AmitShah

Photo : x/@PMOIndia

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News