ಉತ್ತರಾಖಂಡ: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಕಾಲೇಜು ಕಟ್ಟಡ

Update: 2023-08-14 05:59 GMT

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರೀ ಮಳೆಯ ನಡುವೆ ಡೆಹ್ರಾಡೂನ್ ನ ಮಾಲ್ದೇವ್ತಾದಲ್ಲಿರುವ ಡೂನ್ ಡಿಫೆನ್ಸ್ ಕಾಲೇಜಿನ ಕಟ್ಟಡ ಸೋಮವಾರ ಕುಸಿದು ಬಿದ್ದಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿದ್ದ ಬಂದಲ್ ನದಿಯ ರಭಸದ ಪ್ರವಾಹಕ್ಕೆ ಕಾಲೇಜು ಕಟ್ಟಡ ಕೊಚ್ಚಿ ಹೋಗಿದೆ.

ಉತ್ತರಾಖಂಡದ ಹವಾಮಾನ ಇಲಾಖೆಯು ಡೆಹ್ರಾಡೂನ್ ಹಾಗೂ ನೈನಿತಾಲ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ರೆಡ್ ಅಲರ್ಟ್ ಘೋಷಿಸಿದೆ.

ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಗುಡ್ಡಗಾಡು ರಾಜ್ಯ ತೀವ್ರ ಹಾನಿಗೊಳಗಾಗಿದ್ದು, ಇದುವರೆಗೆ 60 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ 17 ಜನರು ಕಾಣೆಯಾಗಿದ್ದಾರೆ.

ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಬಂದ್ ಆಗಿವೆ.

ತೆಹ್ರಿಯ ಕುಂಜಪುರಿ ಬಗರ್ ಧರ್ ಬಳಿ ಭೂಕುಸಿತವು ರಿಷಿಕೇಶ-ಚಂಬಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂಧಿಸಿದೆ, ಆದರೆ ಭಾರೀ ವಾಹನಗಳ ಸಂಚಾರವನ್ನು ರಿಷಿಕೇಶ-ದೇವಪ್ರಯಾಗ-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಖನಿಧಾರ್ನಲ್ಲಿ ನಿಲ್ಲಿಸಲಾಗಿದೆ. ಸುಮಾರು 1,169 ಮನೆಗಳು ಮತ್ತು ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಕೂಡ ಹಾನಿಯಾಗಿದೆ

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News