ಪ್ರವಾದಿ ಪೈಗಂಬರರ ಕುರಿತು ದ್ವೇಷ ಭಾಷಣ | ಯತಿ ನರಸಿಂಗಾನಂದ ಸರಸ್ವತಿ ಬಂಧನ

Update: 2024-10-05 12:01 GMT

ಯತಿ ನರಸಿಂಹಾನಂದ ಸರಸ್ವತಿ | PC : PTI 

ಲಕ್ನೋ : ಪ್ರವಾದಿ ಪೈಗಂಬರರ ಕುರಿತು ದ್ವೇಷ ಭಾಷಣ ಮಾಡಿದ ದಾಸ್ನಾ ದೇವಿ ದೇವಸ್ಥಾನದ ಯತಿ ನರಸಿಂಗಾನಂದ ಸರಸ್ವತಿ ಅವರನ್ನು ಉತ್ತರ ಪ್ರದೇಶದ ಗಾಝಿಯಾಬಾದ್ ಪೊಲೀಸ್ ಲೈನ್‌ನಲ್ಲಿ ಶನಿವಾರ ಬಂಧಿಸಲಾಗಿದೆ.

ಶುಕ್ರವಾರ ರಾತ್ರಿ, ಯತಿ ನರಸಿಂಗಾನಂದ ಸರಸ್ವತಿಯವರ ಹೇಳಿಕೆಯನ್ನು ವಿರೋಧಿಸಿ ಗಾಝಿಯಾಬಾದ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.

ಗಾಝಿಯಾಬಾದ್‌ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಯತಿ ನರಸಿಂಹಾನಂದ ಸರಸ್ವತಿ ಅವರ ಮೇಲೆ ಅಕ್ಟೋಬರ್ 4 ಶುಕ್ರವಾರದಂದು ಪ್ರಕರಣ ದಾಖಲಿಸಲಾಗಿದೆ.

ಗಾಝಿಯಾಬಾದ್‌ನ ಲೋಹಿಯಾ ನಗರದ ಹಿಂದಿ ಭವನದಲ್ಲಿ ಸೆಪ್ಟೆಂಬರ್ 29 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಯತಿ ನರಸಿಂಗಾನಂದ ಸರಸ್ವತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿರುವ ಆರೋಪ ಅವರ ಮೇಲಿದೆ.

ಯತಿ ನರಸಿಂಗಾನಂದ ಸರಸ್ವತಿ ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಈ ಹಿಂದೆ 2022ರಲ್ಲಿ ದ್ವೇಷಪೂರಿತ ಭಾಷಣಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್ 2021 ರಲ್ಲಿ, ಹರಿದ್ವಾರದಲ್ಲಿ ನಡೆದ 'ಧರ್ಮ ಸಂಸದ್' ನಲ್ಲಿ ನಡೆದ ಸಭೆಯಲ್ಲಿ ಹಿಂದೂಗಳಿಗೆ ಬೆದರಿಕೆಯಿರುವ ಸಾಧ್ಯತೆಯಿರುವುದರಿಂದ ಮುಸ್ಲಿಮರ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿರುವ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿರುವಂತೆ ಕರೆ ನೀಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News