ದಿಲ್ಲಿ ಸುರಂಗ ಮಾರ್ಗದಲ್ಲಿ ಕಾರು ಅಡ್ಡಗಟ್ಟಿ ದರೋಡೆ ಪ್ರಕರಣ: ಐವರ ಬಂಧನ

Update: 2023-06-27 10:40 GMT

ಹೊಸದಿಲ್ಲಿ: ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಶನಿವಾರ ನಡೆದ ಹಗಲು ದರೋಡೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ರಾತ್ರಿ ಗಸ್ತಿನಲ್ಲಿ ಸುಮಾರು 1,600 ಜನರನ್ನು ಕರೆದೊಯ್ದು ಸುಮಾರು 2,000 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ, ಅಂತಿಮವಾಗಿ 2 ಲಕ್ಷ ರೂ. ದರೋಡೆಗೆ ಸಂಬಂಧಿಸಿ ಐದು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಡಹಗಲೇ ನಡದಿರುವ ದರೋಡೆ ಘಟನೆಯು ಸುರಂಗ ಮಾರ್ಗದಲ್ಲಿ ಅಳವಡಿಸಲಾಗಿರುವ ಭದ್ರತಾ ಕ್ಯಾಮರಾದಲ್ಲಿಸೆರೆಯಾಗಿತ್ತು. ಈ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ಕಾರಣ ಪೊಲೀಸರು ತುರ್ತು ಕ್ರಮಕ್ಕೆ ಮುಂದಾಗಿದ್ದರು. ಅನೇಕರು ರಾಷ್ಟ್ರ ರಾಜಧಾನಿಯ ಕಾನೂನು ಹಾಗೂ ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ್ದಾರೆ.

ಚಾಂದಿ ಚೌಕ್ ಮೂಲದ ಓಮಿಯಾ ಎಂಟರ್ಪ್ರೈಸಸ್ ನ ಡೆಲಿವರಿ ಏಜೆಂಟ್ ಪಟೇಲ್ ಸಜನ್ ಕುಮಾರ್ ಮತ್ತು ಅವರ ಸಹಾಯಕ ಜಿಗರ್ ಪಟೇಲ್ ಶನಿವಾರ ಕ್ಯಾಬ್ ನಲ್ಲಿ ಗುರುಗ್ರಾಮ್ ಗೆ ತೆರಳುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗನ್ ತೋರಿಸಿ 2 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.

1.5-ಕಿಮೀ ಉದ್ದದ ಸುರಂಗವು ಹೊಸದಿಲ್ಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುತ್ತದೆ . ಇದು ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿದೆ. ಹಗಲು ಹೊತ್ತಿನಲ್ಲಿ ಜನನಿಬಿಡ ಅಂಡರ್ ಪಾಸ್ ನಲ್ಲಿ ದರೋಡೆ ನಡೆಸಿರುವ ಅಪರಾಧಿಗಳ ಹುಚ್ಚು ಧೈರ್ಯವು ದಿಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಬಲವಾದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News