ಅನಾರೋಗ್ಯಪೀಡಿತ ಮಗುವನ್ನು ಡೋರ್ನಿಯರ್ ವಿಮಾನದಲ್ಲಿ ಲಕ್ಷದ್ವೀಪದಿಂದ ಕೊಚ್ಚಿಗೆ ಏರ್‌ಲಿಫ್ಟ್ ಮಾಡಿದ ನೌಕಾಪಡೆ
Update: 2023-06-22 13:21 GMT
ಕೊಚ್ಚಿ: ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಎರಡೂವರೆ ವರ್ಷ ಪ್ರಾಯದ ಮಗುವೊಂದನ್ನು ಲಕ್ಷದ್ವೀಪದ (Lakshadweep) ಅಗತ್ತಿ ದ್ವೀಪದಿಂದ ಕೊಚ್ಚಿಗೆ ಡೋರ್ನಿಯರ್ ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ಬುಧವಾರ ರಾತ್ರಿ ಭಾರತೀಯ ನೌಕಾಪಡೆಯ ಸದರ್ನ್ ನೇವಲ್ ಕಮಾಂಡ್ ಈ ಕಾರ್ಯಾಚರಣೆ ನಡೆಸಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.
ಮಗು ಫೆಬ್ರೈಲ್ ಸೀಜರ್ಸ್, ಅಸ್ಪಿರೇಶನ್ ನ್ಯುಮೋನಿಯಾ ಮತ್ತು ಶ್ವಾಸಕೋಶದ ವೈಫಲ್ಯದಿಂದ ಬಳಲುತ್ತಿದೆ.
ಮಳೆಗಾಲವಾಗಿದ್ದರಿಂದ ಪ್ರತಿಕೂಲ ಹವಾಮಾನದ ಹೊರತಾಗಿಯೂ ಮಗುವನ್ನು ಏರ್‌ಲಿಫ್ಟ್ ಮಾಡಿ ಕೊಚ್ಚಿಯ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ನೌಕಾಪಡೆ ಹೇಳಿಕೆ ತಿಳಿಸಿದೆ.
ಅಗತ್ತಿ ಏರ್‌ಫೀಲ್ಡ್ ಅನ್ನು ರಾತ್ರಿ ಕಾರ್ಯಾಚರಣೆಗಾಗಿ ಸಜ್ಜುಗೊಳಿಸಿರುವುದರಿಂದ ಇಂತಹ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಹಾಗೂ ಇತರ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ ಎಂದೂ ಹೇಳಿಕೆ ತಿಳಿಸಿದೆ.