ಯರಡೋಣ ಜಾಮಿಯಾ ಮಸೀದಿಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ
Update: 2025-01-07 06:59 GMT
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣದ ಜಾಮಿಯಾ ಮಸೀದಿ ಆವರಣದಲ್ಲಿ ಮುಸ್ಲಿಂ ಸಮುದಾಯದವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ವೈವಿಧ್ಯಮಯ ಖಾದ್ಯ ತಯಾರಿಸಿ ಊಟದ ವ್ಯವಸ್ಥೆ ಕಲ್ಪಿಸಿ ಭಾವೈಕ್ಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಸಿದ್ರಾಮಪ್ಪ, ಪ್ರಭು ಯರಡೋಣ, ಶಿವಕುಮಾರ, ವೀರೇಶ ಹೊನ್ನಳ್ಳಿ ನೇತೃತ್ವದಲ್ಲಿ ಮಾಲಾಧಾರಿಗಳು ಪ್ರಸಾದ ಸ್ವೀಕರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಾವೆಲ್ಲ ಭಾರತೀಯರು. ನಮ್ಮ ಧರ್ಮ ನಮಗೆ ಶ್ರೇಷ್ಠ ಧರ್ಮದ ಹೆಸರಲ್ಲಿ ಘರ್ಷಣೆ ನಡೆಸುವುದು ಸರಿಯಲ್ಲ, ಪರಸ್ಪರ ಅರಿತು ಬದುಕು ನಡೆಸಿ ನಾವೆಲ್ಲಾ ಒಂದೇ ಎಂಬ ಸಂದೇಶ ನೀಡಬೇಕು ಎಂದು ಮೌಲ್ವಿ ಮಝಾರ್ ಖಾಲೀದ್ ತಿಳಿಸಿದರು.