ಕಲ್ಲೂರು ಗ್ರಂಥಾಲಯದಲ್ಲಿ ಸುಸ್ಥಿರ ಸಮಾಜಕ್ಕಾಗಿ ಲಿಂಗ ಸಮಾನತೆ ಸಂವಾದ ಕಾರ್ಯಕ್ರಮ

ಸಿರವಾರ : ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಎಲ್ಲಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದು ಕಲ್ಲೂರು ಗ್ರಂಥಾಲಯದ ಗ್ರಂಥಪಾಲಕರಾದ ಪಂಪನಗೌಡ ಕಲ್ಲೂರು ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪ್ರೇರಣೆಯ ಪಥ ಶೀರ್ಷಿಕೆ ಅಡಿಯಲ್ಲಿ ಸುಸ್ಥಿರ ಸಮಾಜಕ್ಕಾಗಿ ಲಿಂಗ ಸಮಾನತೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಸಮ ಸಮಾಜ ಕಟ್ಟಲು ಮಹಿಳಾ ಸಮುದಾಯಕ್ಕೆ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ನೀಡಿದಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯವಾಗುತ್ತದೆ ಹಾಗೂ ಸಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಮಾನ್ವಿ ತಾಲೂಕಿನ ತಾಲೂಲು ಸಂಯೋಜಕ ಮೋನಪ್ಪ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು.
ನಂತರ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಯೋಜಕ ಮುಹಮ್ಮದ್ ಹುಸೇನಿ ಮಾಡಿಗಿರಿ ಅವರು ಚಟುವಟಿಕೆ ಮೂಲಕ ಲಿಂಗ ಸಮಾನತೆ ಬಗ್ಗೆ ವಿವರಣೆಯನ್ನು ನೀಡುವುದರ ಜೊತೆಗೆ ವಿಡಿಯೋ ಕ್ಲಿಪ್ ಗಳನ್ನು ತೋರಿಸುವ ಮೂಲಕ ವಿಷಯವನ್ನು ಪ್ರಸ್ತಾಪ ಪಡಿಸಿದರು.
ಈ ಸಂದರ್ಭದಲ್ಲಿ ಸಂಯೋಜಕ ರಾಜೇಶ, ಶಿಕ್ಷಕರಾದ ಭೀಮರಾಯ, ಉರುಕುಂದಪ್ಪ ಕುರುಡಿ, ಕೆ ಶಿವಪ್ಪ ನಾಯಕ ಕಲ್ಲೂರು, ಅಂಗನವಾಡಿ ಶಿಕ್ಷಕಿ ಪುಟ್ಟಮ್ಮ ಸೇರಿದಂತೆ ಇತರರಿದ್ದರು.