ರಾಯಚೂರು| ಹೋಳಿ ಆಚರಿಸಿ ಸ್ನಾನ ಮಾಡಲು ತೆರಳಿದ ಯುವಕ ನೀರುಪಾಲು; ತೆಲಂಗಾಣದಲ್ಲಿ ಮೃತದೇಹ ಪತ್ತೆ
Update: 2025-03-14 22:21 IST

ಮಹಾದೇವ್
ರಾಯಚೂರು: ಹೋಳಿ ಹಬ್ಬ ಆಚರಿಸಿ ಮೈತೊಳೆದುಕೊಳ್ಳಲು ಹೋಗಿ ಯುವಕ ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕ್ಯಾಂಪ್ ಬಳಿ ಇಂದು ನಡೆದಿದೆ.
ಮೃತನನ್ನು ಯರಗೇರ ಗ್ರಾಮದ ಕಿರಾಣಿ ಅಂಗಡಿ ವ್ಯಾಪಾರಿ ಮಹಾದೇವ್(30) ಎಂದು ಗುರುತಿಸಲಾಗಿದೆ
ಹೋಳಿ ಹಬ್ಬದ ಮುಗಿದ ಬಳಿಕ ಸ್ನೇಹಿತನೊಂದಿಗೆ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಕಾಲುವೆ ಯಲ್ಲಿ ನೀರು ಹರಿಬಿಟ್ಟಿದ್ದರಿಂದ ಈಜಲು ಆಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಸಂಜೆಯಾದರೂ ಮನೆಗೆ ಬಾರದ ಕಾರಣ ವಿವಾರಿಸಿದಾಗ ಕಾಲುವೆಯಲ್ಲಿ ಹುಡುಕಾಟ ನಡೆಸಲಾಗಿದೆ. ನೆರೆಯ ತೆಲಂಗಾಣ ರಾಜ್ಯದ ಗ್ರಾಮವೊಂದರಲ್ಲಿ ಶವ ಪತ್ತೆಯಾಗಿದೆ ಎನ್ನಲಾಗಿದೆ. ಬಳಿಕ ಅಲ್ಲಿನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಶವ ಸಾಗಿಸಲಾಯಿತು. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.