ಭೂಗಳ್ಳರಿಂದ ಸರ್ಕಾರಿ ಜಮೀನು ರಕ್ಷಿಸಲು ಕೆ.ಇ ಕುಮಾರ್ ಒತ್ತಾಯ
Update: 2025-01-12 03:28 GMT
ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸರ್ಕಾರಿ ಜಮೀನನ್ನು ಭೂಗಳ್ಳು ಒತ್ತುವರಿ ಮಾಡಿ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದು ಭೂಗಳ್ಳರಿಂದ ರಕ್ಷಣೆ ಮಾಡಬೇಕು. ನಗರದ ಸಿಯಾತಲಾಬ್‌ನ ಸರ್ವೇ ನಂ 3300 15-20 ಎಕರೆಯಷ್ಟು ಕೆರೆ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಬೇಕು' ಎಂದು ದಲಿತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಇ.ಕುಮಾರ್ ಒತ್ತಾಯಿಸಿದರು.
ಅವರು ಪತ್ರಿಕಾಭವನದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮಾವಿನ ಕೆರೆ ಒತ್ತುವರಿಗೆ ನಗರಸಭೆ ಅಧಿಕಾರಿಗಳು ಹಾಗೂ ಹಿಂದಿನ ಸದಸ್ಯರೇ ಕಾರಣವಾಗಿದ್ದಾರೆ. ಕೆರೆಯ ಜಾಗದಲ್ಲಿ 80 ವರ್ಷಗಳಿಂದ ನೆಲೆಸಿರುವ ನಿವೇಶನ ರಹಿತ ಸಫಾಯಿ ಕರ್ಮಚಾರಿಗಳಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಸಫಾಯಿ ಕರ್ಮಚಾರಿ ಮೇಲುಸ್ತುವಾರಿ ಸಮಿತಿ ಸದಸ್ಯೆ ಗೀತಾ ಸಿಂಗ್, ಅನಿತಾ, ಸರಿತಾ ಹಾಗೂ ರೇಣು ಉಪಸ್ಥಿತರಿದ್ದರು.