ರಾಯಚೂರು | ರಾಷ್ಟ್ರೀಯ ಯುವದಿನ ಅಂಗವಾಗಿ ಮ್ಯಾರಥಾನ್ ಆಯೋಜನೆ

Update: 2025-01-12 13:47 GMT

ರಾಯಚೂರು : ರಾಷ್ಟ್ರೀಯ ಯುವದಿನದ ಅಂಗವಾಗಿ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮ್ಯಾರಥಾನ್ ಓಟ ಏರ್ಪಡಿಸಲಾಯಿತು.

ವೇದಾಂತ ಪದವಿ ಪೂರ್ವ ಕಾಲೇಜು, ರಾಯಚೂರು ವಿಶ್ವವಿದ್ಯಾಲಯ, ಎನ್.ಎಸ್.ಎಸ್ ಘಟಕ, ರೋಟರಿ ಕ್ಲಬ್ , ಕಾಟನ್ ಸಿಟಿ, ಲಯನ್ಸ್ ಕ್ಲಬ್ ರಾಯಚೂರು, ಜೆಸಿಐ ರಾಯಚೂರು ಹಾಗೂ ವಾಸವಿ ಇಂಟರ್ನ್ಯಾಷನಲ್ ಕ್ಲಬ್ ವತಿಯಿಂದ ಈ ಮ್ಯಾರಾಥಾನ್ ಓಟ ನಡೆದಿದ್ದು ಮಾಹಾನಗರ ಪಾಲಿಕೆಯ ಉಪ ಮಾಹಾ ಪೌರರಾದ ಸಾಜೀದ್ ಸಮೀರ್ ಉದ್ಘಾಟಿಸಿದರು.

14 ವರ್ಷದ ಒಳಗಿನ, 18 ವರ್ಷದ ಒಳಗಿನ, 18 ಮೇಲ್ಪಟ್ಟ ಹಾಗೂ ಹಿರಿಯ ನಾಗರಿಕರ ವಿಭಾಗದ ಓಟದ ಸ್ವರ್ಧೆಯಲ್ಲಿ 670 ಕ್ಕೂ ಕ್ರೀಡಾಪಟುಗಳು ಈ ಸ್ವರ್ಧೆಯಲ್ಲಿ ಭಾಗವಹಿಸಿದರು.

ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಓಟವು ಸ್ಟೇಷನ್ ರಸ್ತೆ, ಆರ್.ಟಿ.ಒ ಮಾರ್ಗವಾಗಿ ನವೋದಯ ಮೆಡಿಕಲ್ ಮುಂಭಾಗದಿಂದ ಸಾಗಿ ವೇದಾಂತ ಕಾಲೇಜಿನಲ್ಲಿ ಕೊನೆಗೊಂಡಿತು .

ಮ್ಯಾರಾಥಾನ್ ನ ವಿವಿಧ ವಿಭಾಗದಲ್ಲಿ ಬಹುಮಾನಗಳಿಸಿದ ವಿಜೇತರರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಪ್ರಭಣ್ಣಗೌಡ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ , ಜಿ.ಎಸ್ .ಬಿರಾದರ್ ಎನ್.ಎಸ್.ಎಸ್ ಘಟಕದ ಸಂಯೋಜನ ಅಧಿಕಾರಿ ಜಿ.ಎಸ್.ಬಿರದಾರ, ಪಿಎಸ್ಐ ಪ್ರಕಾಶ್ ಡಂಬಳ್, ಕಾಮಸ್೯ ಚೇಂಬಸ್೯ ಆಫ್ ರಾಯಚೂರಿನ ಅಧ್ಯಕ್ಷ ಎಸ್.ಕಮಲ್ ಕುಮಾರ್ ಜೈನ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News