ರಾಯಚೂರು | ಕುರಿಗಳ ಹಿಂಡಿನ ಮೇಲೆ ಹರಿದ ವಾಹನ : 15 ಕುರಿಗಳು ಸಾವು
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ನವಿಲಗುಡ್ಡ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ, ಕುರಿಗಳ ಹಿಂಡಿನ ಮೇಲೆ ಭಾರಿ ಗಾತ್ರದ ವಾಹನ ಹಾಯ್ದ ಪರಿಣಾಮ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಕುರಿ ಮರಿಗಳು ಗಾಯಗೊಂಡಿವೆ.
ಬೊಮ್ಮನಳ್ಳಿ ಗ್ರಾಮದ ಕುರಿಗಾಯಿಯವರಿಗೆ ಸೇರಿದೆ ಕುರಿಗಳು ಎನ್ನಲಾಗಿದೆ. ನವಿಲುಗುಡ್ಡ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದೆ.
ಅಪರಿಚಿತ ವಾಹನವೊಂದು ವೇಗವಾಗಿ ಕುರಿಗಳ ಹಿಂಡಿನ ಮೇಲೆ ಹಾಯ್ದಿದ್ದು, ಸ್ಥಳದಲ್ಲಿಯೇ ಕುರಿಗಳು ಸಾವನ್ನಪ್ಪಿವೆ, ಗಾಯಗೊಂಡ ಮರಿಗಳನ್ನು ಪಶು ಆಸ್ಪತ್ರೆಗೆ ಸಾಗಿಸಲಾಗಿದೆ.
ಕುರಿಗಾಯಿ ಮುಂದೆ ಸಾಗುತ್ತಿದ್ದಾಗ ಘಟನೆ ನಡೆದಿದ್ದು, ಟಿಪ್ಪರ್ ಅಥವಾ ಭಾರಿ ಗಾತ್ರದ ಲಾರಿ ಹಾಯ್ದಿರಬಹುದು ಎಂದು ಹೇಳಲಾಗಿದೆ. ಜಾಲಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುರಿಗಾಯಿ ಹಾಗೂ ಮಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.