ರಾಯಚೂರು | ʼದತ್ತು ಮಾಸಾಚರಣೆ ಜಾಗೃತಿʼ ಕಾರ್ಯಕ್ರಮ
ರಾಯಚೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಯಚೂರು ಹಾಗೂ ರೈಲ್ವೇ ಇಲಾಖೆಯ ವತಿಯಿಂದ “ದತ್ತು ಮಾಸಾಚರಣೆ ನವೆಂಬರ್-2024 ಜಾಗೃತಿ ಕಾರ್ಯಕ್ರಮ”ವನ್ನು ರೈಲ್ವೇ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ರೈಲ್ವೇ ಸ್ಟೇಷನ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಆರ್.ಪಿ.ಎಫ್. ಇನ್ಸ್ಪೆಕ್ಟರ್ ಅಭಿಷೇಕ್ ಕುಮಾರ್ ಮಾತನಾಡಿ, ರೈಲ್ವೇ ಇಲಾಖೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ತಿಳಿಸಿ ರೈಲಿನಲ್ಲಿ ಮಕ್ಕಳ ಸಂರಕ್ಷಣೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಗಳಾ ಹೆಗಡೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಿರಲಿಂಗಪ್ಪ, ಮಕ್ಕಳ ಸಹಾಯವಾಣಿ ಘಟಕದ ಸಂಯೋಜಕ ಸುದರ್ಶನ್, ರೈಲ್ವೇ ಅಧಿಕಾರಿಗಳಾದ ಎಂ. ಪ್ರವೀಣಕುಮಾರ್, ಪಿ. ರಾಮುಲು, ಬಾಲಕರ ಬಾಲಮಂದಿರದ ಅಧೀಕ್ಷಕ ನಾಗರಾಜ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಭಾರತಿ, ಬಾಲ ಕಾರ್ಮಿಕ ಸಂಯೋಜಕರಾದ ಮಂಜುನಾಥರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ತಿಕ್ಕಯ್ಯ, ಮಕ್ಕಳ ಸಹಾಯವಾಣಿ ಘಟಕದ ಸಿಬ್ಬಂದಿ ತಾಯರಾಜ್, ಮಹೇಶ ಉಪಸ್ಥಿತರಿದ್ದರು.