ರಾಯಚೂರು: ಬಸ್ಸು ಗಳಿಗೆ ಕಲ್ಲು ತೂರಾಟ ಪ್ರಕರಣ; ಓರ್ವ ಆರೋಪಿ ಬಂಧನ

Update: 2024-11-22 05:05 GMT

ತಿಮ್ಮಣ್ಣ ಪಾಟೀಲ್ 

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುರುಗುಂಟಾ ವ್ಯಾಪ್ತಿಯ ಗೋಲಪಲ್ಲಿ ಬಳಿ ಮಂಗಳವಾರ ಕೆಎಸ್ಸಾರ್ಟಿಸಿ ಬಸ್‌ ಹಾಗೂ ಇತರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಗುರುವಾರ ಓರ್ವ‌ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಗೋಲಪಲ್ಲಿ ಗ್ರಾಮದ ತಿಮ್ಮಣ್ಣ ಪಾಟೀಲ್ ಎಂದು ಗುರುತಿಸಲಾಗಿದೆ. ತನ್ನ ಅಕ್ಕ,ಮಾವನಿಗೆ ಸೀಟ್ ಸಿಗದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಾಟ ಮಾಡಿದ್ದಾನೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಗೋಲಪಲ್ಲಿ ಬಳಿ ಕಲ್ಲು ತೂರಾಟದಲ್ಲಿ ಸಾರಿಗೆ ಸಂಸ್ಧೆಯ 3 ಬಸ್ಸಿನ ಕಿಟಕಿ ಹಾಗೂ ಗಾಜುಗಳು ಹೊಡೆದು ಹೋಗಿದ್ದವು, ಚಿತ್ತಾಪುರ ಡಿಪೋದ ಬಸ್ಸಿನ‌ ಚಾಲಕ ಭದ್ರಪ್ಪ ಬಸ್ಸಿನ ಗಾಜು ಕಿಟಕಿಗಳು 79 ಸಾವಿರ ರೂಪಾಯಿ ಮೌಲ್ಯದ ಕಿಟಕಿ ಬಸ್ಸಿನ ಮುಂಭಾದ ಗಾಜುಗಳು ಹೊಡೆದು ಹಾನಿಯಾದ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದರು. ದೂರಿನನ್ವಯ ಪೊಲೀಸರು ದಮತೋರು ದೊಡ್ಡಿಯ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಆತನನ್ನು ತನಿಖೆ ಮಾಡಿದಾಗ,  "ಅಕ್ಕ,ಮಾವನನ್ನು ಸಂಬಂಧಿಕರೊಂದಿಗೆ ಬೆಂಗಳೂರಿಗೆ ಕಳುಹಿಸಲು ಗುರುಗುಂಟಾ ಗ್ರಾಮಕ್ಕೆ ಬಂದಿದ್ದೆ. ಬಸ್ಸುಗಳು ನಿಲ್ಲಿಸದೆ ಇರುವುದಕ್ಕೆ ಹಾಗೂ ಕೂರಲು ಆಸನ ಸಿಗದೆ ಇರುವುದಕ್ಕೆ ಸಮಾಧಾನಗೊಂಡು ವಾಪಸ್ಸು ಮನೆಗೆ‌ ಕರೆದುಕೊಂಡು ಹೋಗಬೇಕಾಯಿತು. ನಂತರ  4 ಮಂದಿ ಗೆಳೆಯರೊಂದಿಗೆ ಗೋಲಪಲ್ಲಿಯ ಗುಡ್ಡದಲ್ಲಿ ಪಾರ್ಟಿಮಾಡಿ ಕುಡಿದ ಅಮಲಿನಲ್ಲಿ ಮಂಗಳವಾರ ತಡರಾತ್ರಿ 1.30 ರ ಸಮಯಕ್ಕೆ ಮೂರು ಕೆಕೆಆರ್ ಟಿಸಿ, ಬಸ್ಸು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲೆಸೆದು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾನೆ.

ಇನ್ನುಳಿದ 4 ಜನ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಎಂದು ಹಟ್ಟಿ ಠಾಣೆಯ ಪಿಐ ಹೋಸಕೆರಪ್ಪ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News