ರಾಯಚೂರು | ಯರಮರಸ್ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತಾಯ

Update: 2024-12-24 15:24 GMT

ರಾಯಚೂರು : ನಗರ ವ್ಯಾಪ್ತಿಯ ವಾರ್ಡ್ ನಂಬರ್ 33ರ ಯರಮರಸ್ ಗ್ರಾಮದಲ್ಲಿ ಮೂಲ ಸೌಕರ್ಯ ಲಭ್ಯವಿಲ್ಲದೇ ಸಾರ್ವಜನಿಕರು ಸಮಸ್ಯೆ ಎದುರುಸುತ್ತಿದ್ದು, ಶೀಘ್ರವೇ ಸರ್ವಿಸ್ ರಸ್ತೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಹೋರಾಟ ಮಾಡಲಾಗುವುದು ಎಂದು ಯರಮರಸ್ ನಾಗರಿಕರ ಹೋರಾಟ ಸಮಿತಿಯ ಮುಖಂಡ ಶಿವಕುಮಾರ ಪೊಲೀಸ್ ಪಾಟೀಲ ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದ ಯರಮರಸ್ ಅನ್ನು 1998ರಲ್ಲಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಇದುವರೆಗೆ ಯರಮರಸ್ ಗ್ರಾಮದಲ್ಲಿ ಒಳಚರಂಡಿ, ಘನ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು..

ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ನಿತ್ಯ ನೂರಾರು ವಾಹನಗಳ ಓಡಾಟ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೇ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಹನುಮೇಶ, ಮಲ್ಲಪ್ಪ, ಪೂಜಾರಿ ಸಿದ್ದಪ್ಪ, ಹನುಮೇಶ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News