ರಾಯಚೂರು | ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ತುರ್ತು ಸನ್ನಿವೇಶಗಳನ್ನು ನಿರ್ವಹಿಸಲು ಸದಾ ಸಿದ್ಧರಿರಬೇಕು: ಡಿಸಿಪಿಓ ಅಮರೇಶ್

Update: 2024-12-24 15:29 GMT

ರಾಯಚೂರು : ಅಗ್ನಿ ಅವಘಡಗಳು ಮತ್ತು ಅಡುಗೆ ಅನಿಲ ಸೋರಿಕೆಯಂತಹ ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಲು ರಾಯಚೂರು ಜಿಲ್ಲೆಯ ಬಾಲಕರ ರಕ್ಷಣಾ ಘಟಕದ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಸಿಬ್ಬಂದಿಗಳು ಸದಾ ಜಾಗೃತರಾಗಿರಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ್ ಕರೆ ನೀಡಿದ್ದಾರೆ.

ಈ ಪ್ರಯತ್ನದ ಅಂಗವಾಗಿ, ಸರ್ಕಾರಿ ಪರಿವೀಕ್ಷಣಾಲಯ ಸಭಾಂಗಣದಲ್ಲಿ ತುರ್ತು ಸನ್ನಿವೇಶ ನಿರ್ವಹಣೆಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಸಿ ಮಾತನಾಡಿದ ಅವರು, ಇತ್ತೀಚೆಗೆ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಮತ್ತು ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾಗುತ್ತಿರುವ ಆಸ್ತಿ ಮತ್ತು ಜೀವ ಹಾನಿಗಳ ಕುರಿತು ಚರ್ಚಿಸಿದರು.

ತರಬೇತಿ ಕಾರ್ಯಾಗಾರದಲ್ಲಿ, ರಾಯಚೂರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾಧಿಕಾರಿ ಶ್ರೀ ಖಾಸಿಂ ಸಾಬ್ ಅವರು ಅಗ್ನಿ ಅವಘಡಗಳ ಕಾರಣ, ಅವುಗಳನ್ನು ತಪ್ಪಿಸಲು ಮುಂಜಾಗ್ರತೆ ಕ್ರಮಗಳು ಮತ್ತು ತುರ್ತು ಸ್ಥಿತಿಯಲ್ಲಿ ಹೇಗೆ ನಷ್ಟವನ್ನು ನಿಭಾಯಿಸಬೇಕೆಂಬ ಬಗ್ಗೆ ತರಬೇತಿ ನೀಡಿದರು. ಅಗ್ನಿ ಶಾಮಕ ಯಂತ್ರಗಳನ್ನು ಬಳಸುವುದರ ಬಗ್ಗೆ ಮತ್ತು ಅಡುಗೆ ಅನಿಲ ಸೋರಿಕೆಯನ್ನು ನಿಯಂತ್ರಿಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಈ ತರಬೇತಿ ಕಾರ್ಯಾಗಾರದಲ್ಲಿ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರು, ಸಿಬ್ಬಂದಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News