ರಾಯಚೂರು | ಆಟೋ-ಕಾರು ಮುಖಾಮುಖಿ ಢಿಕ್ಕಿ : ಆರು ಮಂದಿಗೆ ಗಾಯ
Update: 2024-12-24 10:31 GMT
ರಾಯಚೂರು : ರಾಯಚೂರಿನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಕಾರು ಹಾಗೂ ಆಟೋ ನಡುವೆ ಸೋಮವಾರ ರಾತ್ರಿ ಢಿಕ್ಕಿ ಸಂಭವಿಸಿ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಟೋದಲ್ಲಿ ಆರು ಜನ ಪ್ರಯಾಣಿಸುತ್ತಿದ್ದರು, ರಾಯಚೂರಿನಿಂದ ಮರ್ಚೆಡ್ ಗ್ರಾಮಕ್ಕೆ ಹೋಗುವಾಗ ಎದುರಿನಲ್ಲಿ ಬಂದ ಕಾರಿಗೆ ಆಟೋ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ನಾಗಮ್ಮ, ಬಸಮ್ಮ, ಉಮಾದೇವಿ, ಸುರೇಶ್, ಮಧುಸೂಧನ್ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.