ರಾಯಚೂರು | ಕೇಂದ್ರ ಸರಕಾರದ ವಿರುದ್ಧ ಜ.1ರಂದು ಬೃಹತ್ ಪ್ರತಿಭಟನೆ

Update: 2024-12-25 09:57 GMT

ರಾಯಚೂರು : ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಹಾಗೂ ಪ್ಯಾಸಿಸ್ಟ್ ಪರ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರಕಾರ ವಿರುದ್ಧ ಜ.1 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜನತಾರಂಗದ ಜಿಲ್ಲಾ ಸಂಚಾಲಕ ಎಂ.ಆರ್.ಬೇರಿ ತಿಳಿಸಿದ್ದಾರೆ.

ಮಾಧ್ಯಮ ಗೋಷ್ಟಿ ಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರಕಾರ ಸರ್ವಾಧಿಕಾರಿ ವರ್ತನೆ ತೋರುತ್ತಿದೆ. ಸಂಘ ಪರಿವಾರದ ನೇತೃತ್ವದ ಕಾರ್ಪೊರೇಟ್ ಏಜೆಂಟ್ ಸರಕಾರ ದೇಶದ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ಸರಕಾರದ ಅಧಿಕಾರಿಗಳು ಹಾಗೂ ನೌಕರರು ಆರ್ ಎಸ್ಎಸ್ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ಇದ್ದ ನಿರ್ಬಂಧ ರದ್ದು ಮಾಡಿದೆ. ಪ್ರಧಾನ ಮಂತ್ರಿ ಆದಿಯಾಗಿ ಕೇಂದ್ರ ಸರ್ಕಾರದ ಸಚಿವರು, ಸಂಸದರು, ಅಧಿಕಾರಿಗಳು, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಿಂದೂ ಮತಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಇದು ಫ್ಯಾಸಿಸ್ಟ್ ಸರ್ಕಾರದ ಪರವಾದ ನೀತಿ ಎಂದು ಆರೋಪಿಸಿದರು.

ಚುನಾವಣೆ ಆಯೋಗ, ಸಿಬಿಐ ಸರಕಾರಿ ಸಂಸ್ಥೆಗಳನ್ನು, ಪೊಲೀಸ್ ಮಿಲಿಟರಿಯನ್ನು ಹಿಂದುತ್ವ ಪ್ಯಾಸಿಸಂ ವಿರೋಧ ಪಕ್ಷಗಳನ್ನು ಬಗ್ಗು ಬಡೆಯಲು ಬಳಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರವೀಂದ್ರ ನಾಥ ಪಟ್ಟಿ, ಅಸ್ಲಾಂ ಪಾಶ ಜೀ. ಅಮರೇಶ, ತಮ್ಮಣ್ಣ ವಕೀಲರು, ಫೈಸುದ್ದೀನ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News