ರಾಯಚೂರಿನಲ್ಲಿ ಸಂಭ್ರಮದಿಂದ ಕ್ರಿಸ್ ಮಸ್ ಆಚರಣೆ
ರಾಯಚೂರು : ನಗರದ ರೈಲ್ವೆ ನಿಲ್ದಾಣ ಬಳಿಯ ಮೆಥೊಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ಸಂಭ್ರಮದಿಂದ ಕ್ರಿಸ್ ಮಸ್ ಹಬ್ಬ ಆಚರಿಸಲಾಯಿತು.
ಚರ್ಚ್ ನ ರೆವರೆಂಡ್ ಎ.ಸಿಮಿಯೋನ್ ಸಮೂಹಿಕ ಪ್ರಾರ್ಥನೆ ನೆರವೇರಿಸಿ ಧರ್ಮ ಸಂದೇಶ ನೀಡಿದರು. ಶಾಸಕ ಡಾ.ಶಿವರಾಜ ಪಾಟೀಲ್ ಕೇಕ್ ಕತ್ತರಿಸಿ ಶುಭಕೋರಿದರು.
ಕ್ರೈಸ್ತರು ಕುಟುಂಬದ ಸದಸ್ಯರೊಂದಿಗೆ ಚರ್ಚ್ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಕಟ್ಟಡ, ಆವರಣ, ಕೇಂದ್ರ ರೈಲು ನಿಲ್ದಾಣದಿಂದ ಚರ್ಚ್ ವರೆಗೂ ಅಲಂಕಾರಿಕ ವಿದ್ಯುತ್ ದೀಪಗಳ ಮಾಲೆ ಹಾಕಲಾಗಿತ್ತು.
ಸರ್ವ ಧರ್ಮಗಳು ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಚರ್ಚ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಹಬ್ಬದ ಶುಭ ಕೋರಿದರು. ಭಾರಿ ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಚರ್ಚ್ ಆವರಣದಲ್ಲಿ ಶಾಮಿಯಾನ ಅಳವಡಿಸಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ನಗರದ ಸ್ಟೇಶನ್ ರಸ್ತೆ, ಆಶಾಪುರ ರಸ್ತೆ, ಐಡಿಎಸ್ ಎಂಟಿ ಲೇಔಟ್, ಎಲ್ ಬಿಎಸ್ ಸೇರಿ ಹಲವೆಡೆ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಆಚರಿಸಲಾಯಿತು.