ರಾಯಚೂರು | ಸಚಿವರು, ಶಾಸಕರಿಂದ 65 ಲಕ್ಷ ರೂ. ಮೊತ್ತದ ಶಾಲಾ ಕಟ್ಟಡಗಳ ಲೋಕಾರ್ಪಣೆ

Update: 2025-04-05 19:39 IST
ರಾಯಚೂರು |  ಸಚಿವರು, ಶಾಸಕರಿಂದ 65 ಲಕ್ಷ ರೂ. ಮೊತ್ತದ ಶಾಲಾ ಕಟ್ಟಡಗಳ ಲೋಕಾರ್ಪಣೆ
  • whatsapp icon

ರಾಯಚೂರು : ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಮತ್ತು ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ ಅವರು ಎ.5 ರಂದು ಸಿರವಾರ ತಾಲೂಕಿನ ಅತ್ತನೂರಗೆ ತೆರಳಿ 65 ಲಕ್ಷ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಯಡಿ ನೂತನವಾಗಿ ನಿರ್ಮಾಣವಾದ ಶಾಲಾ ಕೊಠಡಿಗಳನ್ನು ಲೋಕಾರ್ಪಣೆ ಮಾಡಿದರು.

ಪೂರ್ವನಿಗದಿಯಂತೆ ಬೆಳಗ್ಗೆ ರಾಯಚೂರು ನಗರದಲ್ಲಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸಚಿವರು ನೇರವಾಗಿ ಅತ್ತನೂರಗೆ ತೆರಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕೆ.ಕೆ.ಆರ್.ಡಿ.ಬಿಯ 2023-24ನೇ ಸಾಲಿನ ಮ್ಯಾಕ್ರೊ ಯೋಜನೆಯಡಿ ಅಂದಾಜು 27 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಾನವಿ ವಿಧಾನಸಭಾ ಕ್ಷೇತ್ರದ ಸಿರವಾರ ತಾಲೂಕಿನ ಅತ್ತನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಹೆಚ್ಚುವರಿ ಕೊಠಡಿಗಳನ್ನು ಮತ್ತು ಮೈಕ್ರೋ ಅಕ್ಷರ ಆವಿಷ್ಕಾರ ಯೋಜನೆಯಡಿ ಪಿ.ಆರ್.ಇ.ಡಿ. ವತಿಯಿಂದ ನಿರ್ಮಿಸಿದ ಶಾಲೆಯ ನೂತನ ಕೊಠಡಿಗಳು ಹಾಗೂ ಸೌರಶಕ್ತಿ ವ್ಯವಸ್ಥೆ ಕಾಮಗಾರಿಗಳ ಪ್ರಗತಿಗೆ ಸಚಿವರು ಮತ್ತು ಶಾಸಕರು ಚಾಲನೆ ನೀಡಿದರು.

ಇದೆ ವೇಳೆ ವೋಲ್ವೊ ಗ್ರೂಪ್ ಟ್ರಸ್ಟ್ ನಿರ್ಮಿಸಿದ ಮಿನಿ ಸಾಯನ್ಸ್ ಸೆಂಟರನ್ನು ಸಚಿವರು ಮತ್ತು ಶಾಸಕರು ಉದ್ಘಾಟಿಸಿ ವೀಕ್ಷಣೆ ಮಾಡಿದರು.

ಸಮಾರಂಭದಲ್ಲಿ ತಹಶೀಲ್ದಾರ್‌ ರವಿ ಅಂಗಡಿ, ಅತ್ತನೂರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪಾರ್ವತಮ್ಮ‌ ಗಂಡ ವಿರುಪಾಕ್ಷಯ್ಯ, ಹಿರಿಯ ಮುಖಂಡರಾದ ಜಿ.ಶಿವಮೂರ್ತಿ, ಗ್ರಾಮದ ಪ್ರಮುಖರಾದ ಮಹಾಂತೇಶ ಪಾಟೀಲ, ಬಸವರಾಜ ಪಾಟೀಲ ಸೇರಿದಂತೆ ಇತರರು ಇದ್ದರು. ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಪಂ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಇದ್ದರು.

ನಾನಾ ಅಭಿವೃದ್ಧಿ ಕಾಮಗಾರಿ :

ಸಚಿವರು ಮತ್ತು ಶಾಸಕರು ಸಿರವಾರ ಪಟ್ಟಣಕ್ಕೆ ತೆರಳಿ ಅಲ್ಲಿನ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಕೆ.ಕೆ.ಆರ್.ಡಿ.ಬಿ. ಮೈಕ್ರೋ ಅಕ್ಷರ ಆವಿಷ್ಕಾರ ಯೋಜನೆಯಡಿ ಪಿ.ಆರ್.ಇ.ಡಿ.ವತಿಯಿಂದ ಶಾಲೆಗೆ ಸೌರಶಕ್ತಿ ವ್ಯವಸ್ಥೆ, ವಿಜ್ಞಾನ ಪ್ರಯೋಗಾಲಯದ ಸುಧಾರಣೆ ಹಾಗೂ ಉಪಕರಣಗಳು, ಭೋಜನಾಲಯ, ಶೌಚಾಲಯಗಳು ಎನ್.ಎಸ್.ಕ್ಯೂ.ಎಫ್. ಖರೀದಿ ಸಲಕರಣೆಗಳ ಉದ್ಘಾಟನೆ ಹಾಗೂ ಸಿರವಾರ ಪಟ್ಟಣದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ವಿಶೇಷ ಅಭಿವೃದ್ಧಿ ನಿಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾಂಗಣ ಮತ್ತು ಗ್ರಂಥಾಲಯ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಗ್ರಾಮ ಆಡಳಿತ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News