ರಾಯಚೂರು | ನರೇಗಾದಲ್ಲಿ ಅವ್ಯವಹಾರ ಆರೋಪ : ಬಹುಜನ ಸಂಘರ್ಷ‌ ಸಮಿತಿಯಿಂದ ತನಿಖೆಗೆ ಒತ್ತಾಯ

Update: 2025-04-10 18:24 IST
ರಾಯಚೂರು | ನರೇಗಾದಲ್ಲಿ ಅವ್ಯವಹಾರ ಆರೋಪ : ಬಹುಜನ ಸಂಘರ್ಷ‌ ಸಮಿತಿಯಿಂದ ತನಿಖೆಗೆ ಒತ್ತಾಯ
  • whatsapp icon

ರಾಯಚೂರು : ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 15ನೇ ಸಾಲಿನ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದ್ದು, ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಬಹುಜನ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಲಾಯಿತು.

ದೇವದುರ್ಗ ವಿಧಾನಸಭಾ ಕ್ಷೇತ್ರದ ಅರಕೇರಾ ತಾಲೂಕಿನ ಜಾಗಿರ ಜಾಡಲದಿನ್ನಿ ಗ್ರಾಮ ಪಂಚಾಯತ್‌ನಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಬರುವ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆಸಿದ ಪಂಚಾಯತ್‌ ಅಭಿವೃಧಿ ಅಧಿಕಾರಿ ಮುರಳಿ ಮೋಹನ್ ಅವರನ್ನು ಅಮಾನತುಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದರು.

ನರೇಗಾ ಯೋಜನೆಯಡಿಯಲ್ಲಿ ಬರುವ ಜಾನುವಾರು ಶೆಡ್ಡುಗಳ ನಿರ್ಮಾಣ, ಬದು ನಿರ್ಮಾಣ, ರಸ್ತೆ, ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅಕ್ರಮವಾಗಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಕೂಡಲೇ ಪರಿಶೀಲಿಸಿ ತಕ್ಷಣ ತಪ್ಪಿತಸ್ಥರಿಗೆ ಅಮಾನತು ಮಾಡಬೇಕು ಎಂದು ಸಂಘಟನೆಯ ಮುಖಂಡ ಶರಣಪ್ಪ ಬಲ್ಲಟಗಿ ಹೇಳಿದರು.

ಸದರಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿಯ ಯೋಜನಾ ವರದಿ ಅಥವಾ ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿಗಳನ್ನು ನಿರ್ವಹಿಸದೇ ತಮಗೆ ಬೇಕಾದಂತೆ ಮನಸೋ ಇಚ್ಛೆ ಮಾಡಿದ್ದಾರೆ. ಇವರ ಬೇಜವಬ್ದಾರಿ ಮತ್ತು ಕರ್ತವ್ಯ ಲೋಪದಿಂದ ಸರಕಾರದ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ದೂರನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತನಿಖಾ ತಂಡ ನೇಮಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News