ರಾಯಚೂರು | ಅಬಕಾರಿ ಅಧಿಕಾರಿಗಳ ದಾಳಿ: ಮೂವರ ಬಂಧನ
Update: 2024-11-22 12:51 GMT
ರಾಯಚೂರು : ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 70 ಲೀಟರ್ ನಿಷೇಧಿತ ಕಲಬೆರಕೆ ಶೇಂದಿ ಹಾಗೂ ಸಿ.ಎಚ್ ಪೌಡರ್ ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ವಾರ್ಡ್ ನಂಬರ್ 31ರ ಸಿಯತಲಾಬ್ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಲಕ್ಷ್ಮಣ, ಹುಲಿಗೆಮ್ಮ ಮತ್ತು ಜಮಲಮ್ಮ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಲಕ್ಷ್ಮಣ ಎಂಬುವವರ ಮನೆ ಮೇಲೆ ದಾಳಿ ನಡೆಸಿ ಕೈ ಹೆಂಡ ತಯಾರಿಸಲು ಬಳಸುವ ಅಲ್ಫಾ ಜೋಲ್ಮಂ, ಸಿಎಚ್ ಪೌಡರ್, ಬಿಳಿ ಪೇಸ್ಟ್ ಸೇರಿದಂತೆ 70 ಲೀಟರ್ ಕಲಬೇರಿಕೆ ಸೇಂದಿ ಜಪ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಗರಸಭೆ ವಾರ್ಡ್ ನಂಬರ್ 31ರಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ನೇತಾಜಿ ನಗರ ಠಾಣೆಯ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.