ರಾಯಚೂರು | ಅಲೆಮಾರಿ ಸಮುದಾಯದ ಒಳ ಮೀಸಲಾತಿ ಹೆಚ್ಚಿಸಲು ಆಗ್ರಹ ; ಡಿ.13 ರಂದು ಬೆಳಗಾವಿ ಚಲೋ

Update: 2024-12-07 14:52 GMT

ರಾಯಚೂರು : ಪರಿಶಿಷ್ಟ ಜಾತಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಶೇ.3ರಷ್ಟು ಮೀಸಲು ನಿಗಧಿಪಡಿಸಲು ಆಗ್ರಹಿಸಿ ಡಿ.13 ರಂದು ಅಲೆಮಾರಿ ಸಮೂದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಬೆಳಗಾವಿಯ ಸುವರ್ಣ ಸೌಧ ಚಲೋ ಹೋರಾಟ ಹಮ್ಮಿ ಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಸಂಚಾಲಕ ಮಹಾಂತೇಶ ಸಂಕಲ್ ಹೇಳಿದ್ಧಾರೆ.

ಸುಪ್ರೀಂ ಕೋರ್ಟಿನ ಸೂಚನೆಯಂತೆ ರಾಜ್ಯ ಸರಕಅರಗಳೇ ಒಳ ಮೀಸಲು ಜಾರಿಗೆ ನಿರ್ದೇಶನ ನೀಡಿದೆ. ರಾಜ್ಯ ಸರಕಾರ ಒಳ ಮೀಸಲಾತಿ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ರಚಿಸಿದೆ. ಆದರೆ ಈ ಹಿಂದೆ ಒಳಮೀಸಲು ವರ್ಗೀಕರಣದಲ್ಲಿ ಅಲೆಮಾರಿ ಸಮೂದಾಯಗಳಿಗೆ ಶೇ.1ರಷ್ಟು ಮಾತ್ರ ಮೀಸಲು ನಿಗಧಿಗೊಳಿಸಲಾಗಿದೆ. ಸರಿ ಸುಮಾರು10 ಲಕ್ಷ ಜನಸಂಖ್ಯೆ ಹೊಂದಿರುವ 49 ಅಲೆಮಾರಿ ಸಮುದಾಯಗಳಿಗೆ ಒಂದರಷ್ಟು ಮೀಸಲಾತಿಯಿಂದ ಅನ್ಯಾಯವಾಗಲಿದ್ದು ಶೈಕ್ಷಣಿಕ, ಉದ್ಯೋಗಗಳಿಂದ ಮತ್ತೊಮ್ಮೆ ವಂಚನೆಗೆ ಒಳಗಾಗುವಂತಾಗುತ್ತದೆ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಲೆಮಾರಿಗಳಿಗೆ ವಸತಿ ಸೌಲಭ್ಯ ನೀಡಬೇಕು. ಹಂಪಿ ವಿಶ್ವವಿದ್ಯಾಲಯದಲ್ಲಿ ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪಿಸುವುದು, ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿಗೆ ಎಲ್ಲಾ ವ್ಯವಸ್ಥೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ನಡೆಯಲಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಸಾವಿರ ಜನರು ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲೆಮಾರಿ ಸಮೂದಾಯ ಜನರು ಸ್ವಯಂಪ್ರೇರಿತರಾಗಿ ಬೆಳಗಾವಿಗೆ ಆಗಮಿಸುವಂತೆ ಮನವಿ ಮಾಡಿದರು.

ಅಲೆಮಾರಿ ಬೇಡ, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ಚನ್ನದಾಸರ ಸೇವಾ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶ್ರೀನಿವಾಸ, ಶ್ರೀನಿವಾಸ ಎಸ್.ಆರ್., ಹುನೇಪ್ಪ ಯಡವಲ್ಲಿ, ಭೀಮರಾಯ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News