ರಾಯಚೂರು | ನಕಲಿ‌ ನೋಟುಗಳ ಚಲಾವಣೆ ; ಎಎಸ್ಐ ಸೇರಿ ನಾಲ್ವರ ಬಂಧನ

Update: 2025-03-17 11:06 IST
ರಾಯಚೂರು | ನಕಲಿ‌ ನೋಟುಗಳ ಚಲಾವಣೆ ; ಎಎಸ್ಐ ಸೇರಿ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ

  • whatsapp icon

ರಾಯಚೂರು : ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಎಎಸ್ಐ ಸೇರಿದಂತೆ ನಾಲ್ಕು ಜನ ಆರೋಪಿಗಳನ್ನು ಪಶ್ಚಿಮ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಡಿಎಆರ್ ಎಎಸ್ಐ ಮರಿಲಿಂಗ, ಸದ್ದಾಂ, ಸಿದ್ದಲಿಂಗಪ್ಪ, ರವಿ ಎಂದು ಗುರುತಿಸಲಾಗಿದೆ.

ರಾಯಚೂರು ಗಡಿಭಾಗದ ಗ್ರಾಮಗಳಲ್ಲಿ ಹಾಗೂ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಖೋಟಾ ನೋಟುಗಳ ಚಲಾವಣೆಯಾಗುತ್ತಿರುವ ಬಗ್ಗೆ ದೂರು‌ ಕೇಳಿ ಬಂದಿತ್ತು. ಗಡಿಭಾಗದ ಅನೇಕ ಪೆಟ್ರೋಲ್ ಬಂಕ್ ಗಳಲ್ಲಿ ನಕಲಿ‌ ನೋಟುಗಳು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಎಸ್ ಪಿ.ಪುಟ್ಟಮಾದಯ್ಯ ನೇತೃತ್ವದ ಪೊಲೀಸರ ತಂಡ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದರು. ಇದರ ಪರಿಣಾಮವಾಗಿ ಇಂದು ಆಶಾಪುರ ರಸ್ತೆಯ ಆರೋಪಿ ಸದ್ದಾಂ ಮನೆಯಲ್ಲಿ ನಕಲಿ ನೋಟುಗಳ ಸಮೇತ ನಾಲ್ವರನ್ನು ಪಶ್ಚಿಮ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಎಲ್ಲಾ ನೋಟುಗಳು 500 ರೂ. ಗಳಿದ್ದು, ಬಂಧಿತರಲ್ಲಿ ಮೂವರು ಟ್ರಾನ್ಸ್ ಪೋರ್ಟ್ ನಲ್ಲಿ ಚಾಲಕ, ಕ್ಲಿನರ್ ಹಾಗೂ ಲಾರಿ ಮಾಲಕರಾಗಿದ್ದು ಆಂಧ್ರ ಪ್ರದೇಶದಿಂದ ನಕಲಿ ನೋಟುಗಳನ್ನು ಪಡೆದು ಜಿಲ್ಲೆಯಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  

ನಕಲಿ ನೋಟುಗಳನ್ನು ಪಡೆದು 10 ಸಾವಿರಕ್ಕೆ ಮೂರು ಸಾವಿರ ಪಡೆದು ಹಣವನ್ನು ಡಬ್ಲಿಂಗ್ ಮಾಡುತ್ತಿದ್ದರು. ಆರೋಪಿಗಳು ನಕಲಿ ನೋಟಿನ ದಂಧೆ ಶುರು ಮಾಡಿದ ಮೊದಲನೇ ದಿನವೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿ ದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News