ರಾಯಚೂರು | ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ

Update: 2024-12-07 12:29 GMT

ರಾಯಚೂರು : ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರುದಿನಗಳ ಕಾಲ ಆಯೋಜಿಸಿದ್ದ ಕೃಷಿ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಘೋಷವಾಕ್ಯದೊಂದಿಗೆ ಮೂರು ದಿನಗಳ ಕೃಷಿ ಮೇಳಕ್ಕೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮುಂಡರಗಿಯ ಕಪ್ಪತ್ತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಮಲ್ಲೇಶ ಕೊಲಮಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಮೇಳದಲ್ಲಿ ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳ ಪರಿಕರ, ನೂತನ ತಂತ್ರಜ್ಞಾನಗಳ ಹಾಗೂ ಸಮಗ್ರ ಕೃಷಿ ಪದ್ದತಿಯ ಕುರಿತು ಉಪಯುಕ್ತ ಮಾಹಿತಿ ನೀಡಲಾಯಿತು.

ಮೇಳದಲ್ಲಿ ಸೋಲಾಪುರ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಸರಕಾರಿ ಸಂಸ್ಥೆಗಳು ಹಾಗೂ ಕೃಷಿ ಕಂಪನಿಗಳು ಭಾಗವಹಿಸಿದ್ದವು. ಟ್ರಾಕ್ಟರ್, ಟಿಲ್ಲರ್, ಔಷಧ ಸಿಂಪಡಿಸುವ ಡ್ರೋನ್, ಆಧುನಿಕ ಕೃಷಿ ಯಂತ್ರೋಪಕರಣಗಳು, ಸೌರ ಶಕ್ತಿಯ ಸ್ವಯಂ ಚಾಲಿತ ನೀರಿನ ಪಂಪುಗಳು, ಬೆಳೆ ರಕ್ಷಣೆಯ ಮಾರ್ಗದರ್ಶನ ಮಾಡಲಾಯಿತು.

ಸಾಂಪ್ರಾದಾಯಿಕ ಕೃಷಿಯ ಜತೆಗೆ, ಆಧುನಿಕ ಸಮಗ್ರ ಕೃಷಿ ಪದ್ದತಿ, ಕುರಿ, ಮೊಲ ಸಾಕಾಣೆ ಹಾಗೂ ವಿವಿಧ ಕೃಷಿಯೇತರ ಕಾರ್ಯಗಳಿಂದ ಆರ್ಥಿಕ ಸ್ವಾವಾಲಂಬಿ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಟಾಲ್ ಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ.

ಕೀಟಶಾಸ್ತ್ರ ವಿಭಾಗದಿಂದ ಆಯೋಜಿಸಿದ ವಿಸ್ಮಯ ಕೀಟ ಪ್ರಪಂಚ ನೊಡುಗರ ಗಮನ ಸೆಳೆಯುತ್ತಿತ್ತು. ಇಲ್ಲಿ ವಿವಿಧ ಬಗೆಯ ಕೀಟಗಳು ಪ್ರದರ್ಶನಕ್ಕೆ ಇಡಲಾಗಿದೆ ಹಾಗೂ ಕೀಟಗಳಿಂದ ತಯಾರಿಸಿದ ಭಕ್ಷ್ಯಗಳು ಇಡಲಾಗಿದೆ. ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿ ಕೀಟಗಳ ಬಗ್ಗೆ ಮಾಹಿತಿ ಪಡೆದರು.

ಆಡಳಿತ ಭವನದಲ್ಲಿ ತೆರೆಯಲಾದ ಮತ್ಸ್ಯಮೇಳ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ ಫಲಪುಷ್ಪ ಪ್ರದರ್ಶನ ನೋಡುಗರನ್ನು ಆಕರ್ಷಿಸಿತು. ಹಣ್ಣುಗಳಿಂದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಸೈನಿಕರ ಕಲಾಕೃತಿಗಳು, ಹೂವುಗಳಿಂದ ತಯಾರಿಸಿದ ದೆಹಲಿಯಾ ಇಂಡಿಯಾ ಗೇಟ್, ಶಹೀದ್ ಸ್ಮಾರಕ ನೋಡುವಂತಿದೆ.

ತೋಟಗಾರಿಕೆ ಇಲಾಕೆಯ ಉಪ ನಿರ್ದೇಶಕ ಮುಹಮ್ಮದ್ ಅಲಿ ನಿಂಬೆರಗಿ ಅವರ ನೇತೃತ್ವದಲ್ಲಿ ಫಲಪುಷ್ಪ ಪ್ರದರ್ಶನ ಆಕರ್ಷಣೆ ಮುಡಿಸುವುದರ ಜೊತೆಗೆ ಉಪಯುಕ್ತ ಮಾಹಿತಿ ನೀಡುತ್ತದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News