ರಾಯಚೂರು | ಭೀಕರ ರಸ್ತೆ ಅಪಘಾತ : ವರದಿಗಾರ ಸಹಿತ ಇಬ್ಬರು ಮೃತ್ಯು

Update: 2025-01-07 14:25 GMT

ರಾಯಚೂರು : ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ಟಿಗಾ ಕಾರು ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು ಪ್ರಜಾವಾಣಿ ವರದಿಗಾರ ಬಸವರಾಜ ನಂದಿಕೋಲಮಠ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಮೆಹಬೂಬ್‌ ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಲಿಂಗಸೂಗೂರು ನಿವಾಸಿಗಳಾದ ಆರು ಮಂದಿ ಕೊಲನಪಾಕಕ್ಕೆ ತೆರಳಿ ಹಿಂದಿರುಗುವಾಗ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಎರ್ಟಿಗಾ ಕಾರು ಡ್ರೈವರ್‌ನ ಅತಿವೇಗ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಚಿನ್ನಯ್ಯ ತಾತ, ಮಲ್ಲಿಕಾರ್ಜುನ್, ಭಗವಾನ್, ಅಮರೇಶ್ ಮತ್ತು ಮಲ್ಲಣ್ಣ ಅವರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News