ರಾಯಚೂರು | ಲಾರಿ ಹರಿದು ತಳ್ಳುಬಂಡಿ ವ್ಯಾಪಾರಿ ಮೃತ್ಯು
Update: 2025-01-07 15:40 GMT
ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ರಾಜ್ಯ ಹೆದ್ದಾರಿ 23 ರಾಯಚೂರು ರಸ್ತೆಯಲ್ಲಿರುವ ಅಜ್ಮೀರ್ ಹೋಟೆಲ್ ಎದುರು ಮಧ್ಯಾಹ್ನ ಲಾರಿ ಹರಿದು ಬೀದಿ ಬದಿ ವ್ಯಾಪಾರಿ ಸಾವನ್ನಪಿದ ಘಟನೆ ನಡೆದಿದೆ.
ಮೃತನನ್ನು ಮಾನ್ವಿ ಪಟ್ಟಣದ ವಾರ್ಡ್ ನಂ-3 ರ ವ್ಯಾಪ್ತಿಯ ನಮಾಜಗೆರೆ ಗುಡ್ಡ ಬಡಾವಣೆಯ ನಿವಾಸಿ ಮೆಹಬೂಬ್(50) ಎಂದು ಗುರುತಿಸಲಾಗಿದೆ.
ಎಂದಿನಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಅತೀ ವೇಗದಿಂದ ಹಿಂಬದಿಯಿಂದ ಬಂದ ಲಾರಿ ಮೆಹಬೂಬ್ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಮಾನ್ವಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.