ಶರಾವತಿ ಸಂತ್ರಸ್ತರು ಸರ್ವೇಗೆ ಸಹಕರಿಸಿ : ಸಚಿವ ಮಧು ಬಂಗಾರಪ್ಪ ಮನವಿ
Update: 2025-04-05 23:42 IST

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರ ಬಳಿ ಸರ್ವೇಯರ್ ಗಳು ಬಂದಾಗ ಸ್ಥಳೀಯರು ಸಂಯಮ, ಸಮಾಧಾನದಿಂದ ವರ್ತಿಸಿ ಸಂಪೂರ್ಣ ಮಾಹಿತಿ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಹೋರಾಟ ಮಾಡಿದ್ದೆವು. ಹಲವು ದಶಕಗಳ ಸಮಸ್ಯೆ ಈಗ ಒಂದು ಹಂತಕ್ಕೆ ಬಂದಿದೆ. ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ. 9 ಸಾವಿರ ಎಕರೆಗೆ ಸರ್ವೇ ಮಾಡಲು ಆದೇಶ ಬಂದಿದೆ. ಆತ್ಯಾಧುನಿಕ ಸರ್ವೇ ಉಪಕರಣಗಳನ್ನು ನೀಡಲಾಗಿದೆ. ಸರ್ವೇಗೆ ಅಧಿಕಾರಿಗಳು ಬಂದಾಗ ಜನರು ಸಮಾಧಾನದಿಂದ ಸಹಕರಿಸಬೇಕು ಎಂದು ಕೋರಿದರು.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ಮೈದಾನದ ಕುರಿತು ಕೇಳಿದ ಪ್ರಶ್ನೆಗೆ, ಆ ಕುರಿತು ನಾನು ಏನೂ ಮಾತಾಡುವುದಿಲ್ಲ. ಈ ಕಾನೂನಿನ ಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.