ಧರ್ಮ ಅಲ್ಲ, ಪಕ್ಷ ಅಪಾಯದಲ್ಲಿದೆ : ಬಿಜೆಪಿ ವಿರುದ್ಧ ನಟ ರಿತೇಶ್ ದೇಶ್ ಮುಖ್ ವಾಗ್ದಾಳಿ

Update: 2024-11-11 15:37 GMT

ಲಾತೂರ್ : ಕೆಲಸವೆ ಧರ್ಮವಾಗಿದೆ. ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡುವುದೇ ಕರ್ಮವಾಗಿದೆ. ಅದುವೇ ಧರ್ಮ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಧರ್ಮವನ್ನು ಸಾಕಾರಗೊಳಿಸುತ್ತಾರೆ. ಆದರೆ ಕೆಲಸ ಮಾಡದವರು ಧರ್ಮವನ್ನು ಗುರಾಣಿಯಾಗಿ ಬಳಸುತ್ತಾರೆ ಎಂದು ಖ್ಯಾತ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಟ ರಿತೇಶ್ ದೇಶ್ಮುಖ್ ಇತ್ತೀಚೆಗೆ ಲಾತೂರ್ ಗ್ರಾಮಾಂತರದಲ್ಲಿ ತಮ್ಮ ಕಿರಿಯ ಸಹೋದರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಧೀರಜ್ ವಿಲಾಸ್ರಾವ್ ದೇಶಮುಖ್ ಅವರ ಪರ ಪ್ರಚಾರ ನಡೆಸುತ್ತಿದ್ದರು. ಧರ್ಮ ಅಪಾಯದಲ್ಲಿದೆ ಎಂದು ಹೇಳುವವರ ಪಕ್ಷ ಆಪಾಯದಲ್ಲಿದೆ ಎಂದು ರಿತೇಶ್ ದೇಶಮುಖ್ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ. ಬಿಜೆಪಿಯ ಧರ್ಮಧಾರಿತ ರಾಜಕೀಯವನ್ನು ವಿರೋಧಿಸಿದ ಅವರು ಬಿಜೆಪಿಯ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪರ ಪ್ರಚಾರ ಸಭೆಗಳಲ್ಲಿ ರಿತೇಶ್ ಭಾಗವಹಿಸಿ ಮಾತನಾಡುತ್ತಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣವನ್ನು ಇತ್ತೀಚಿನ ಲೋಕಸಭೆ ಚುನಾವಣೆಗೆ ಹೋಲಿಸಿದ ರಿತೇಶ್, ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ನಗರದ ಹೆಸರಾಂತ ಶೈಕ್ಷಣಿಕ ಮಾದರಿಯ ಹೊರತಾಗಿಯೂ ಲಾತೂರ್ನಲ್ಲಿ ಉದ್ಯೋಗಾವಕಾಶಗಳ ಕೊರತೆಯನ್ನು ಅವರು ಒತ್ತಿ ಹೇಳಿದರು. ಸಾರ್ವಜನಿಕರನ್ನು ಧರ್ಮ ರಾಜಕಾರಣದಲ್ಲಿ ಬಳಸುವುದಕ್ಕೆ ಬಿಜೆಪಿಯನ್ನು ಅವರು ಟೀಕಿಸಿದ್ದಾರೆ.

'ಲಾತೂರ್ ಮಾದರಿ' ಮಹಾರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದ್ದರೂ, ಸ್ಥಳೀಯ ಯುವಕರು ನಿರುದ್ಯೋಗದ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿ ಎಂದು ರಿತೇಶ್ ಹೇಳಿದ್ದಾರೆ. ನವೆಂಬರ್ 20 ರಂದು ಮತದಾನ ಮಾಡುವಾಗ ಮತದಾರರು ಈ ನಿರ್ಣಾಯಕ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ರಿತೇಶ್ ಒತ್ತಾಯಿಸಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಪ್ರಚಾರದಲ್ಲಿ ಧರ್ಮವನ್ನು ಬಳಸಿಕೊಂಡಿದ್ದಕ್ಕೆ ರಿತೇಶ್ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ನಿಜವಾಗಿಯೂ ನಿಮ್ಮ ಧರ್ಮ ಅಪಾಯದಲ್ಲಿದೆ ಎಂದು ಮತ ಯಾಚಿಸುವವರ ಪಕ್ಷ ಅಪಾಯದಲ್ಲಿದೆ ಎಂದು ರಿತೇಶ್ ವಾಗ್ದಾಳಿ ನಡೆಸಿದ್ದಾರೆ.

'ಧರ್ಮವನ್ನು ಉಳಿಸಿ' ಮತ್ತು 'ಧರ್ಮವನ್ನು ರಕ್ಷಿಸಿ' ಎಂದು ಕರೆ ನೀಡಿ ಧರ್ಮ ಅಪಾಯದಲ್ಲಿದೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಳ್ಳುತ್ತವೆ. ಈ ಪಕ್ಷಗಳು ವಾಸ್ತವವಾಗಿ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ರಕ್ಷಣೆಯನ್ನು ಬಯಸುತ್ತಿವೆ. ಧರ್ಮದ ನೆಪದಲ್ಲಿ ತಮ್ಮ ಅಗತ್ಯಗಳನ್ನು ಈ ಪಕ್ಷಗಳು ಮರೆಮಾಚುತ್ತಿವೆ ಎಂದು ರಿತೇಶ್ ವಾದಿಸಿದ್ದಾರೆ.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ರಿತೇಶ್, ಒಡೆದು ಆಳುವ ತಂತ್ರಕ್ಕೆ ಬೀಳಬೇಡಿ ಎಂದು ಮನವಿ ಮಾಡಿದರು. ಧರ್ಮವನ್ನು ಬೋಧಿಸುವವರಿಗೆ ನಾವು ಧರ್ಮವನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿ. ಬದಲಿಗೆ, ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳ ಬಗ್ಗೆ ಮಾತನಾಡೋಣ ಎಂದು ಹೇಳಿ. ನಮ್ಮ ತಾಯಿ ಮತ್ತು ಸಹೋದರಿಯರು ನಿಜವಾಗಿಯೂ ಸುರಕ್ಷಿತರೇ ಎಂದು ಅವರಲ್ಲಿ ಕೇಳಿ. ನಮ್ಮ ಬೆಳೆಗಳಿಗೆ ಅವರು ಯಾವ ಬೆಲೆಯನ್ನು ಖಚಿತಪಡಿಸುತ್ತಾರೆ ಎಂದು ಅವರಲ್ಲಿ ಕೇಳಿ ಅವರು ರಿತೇಶ್ ಹೇಳಿದ್ದಾರೆ.

ಸಹೋದರರಾದ ಧೀರಜ್ ಮತ್ತು ಅಮಿತ್ ದೇಶಮುಖ್ ತಮ್ಮ ತಮ್ಮ ಪ್ರದೇಶದ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಎಂಬ ವಿಶ್ವಾಸವನ್ನು ರಿತೇಶ್ ವ್ಯಕ್ತಪಡಿಸಿದ್ದಾರೆ. ಜನರಿಗಾಗಿ ಕೆಲಸ ಮಾಡುವ ಅವರ ಬದ್ಧತೆ ಮತ್ತು ಸಾಮರ್ಥ್ಯವನ್ನು ರಿತೇಶ್ ಶ್ಲಾಘಿಸಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರ ರಚಿಸುವ ಭರವಸೆಯನ್ನೂ ದೇಶ್ ಮುಖ್ ವ್ಯಕ್ತ ಪಡಿಸಿದ್ದಾರೆ.

ಲಾತೂರ್ ಗ್ರಾಮಾಂತರದಲ್ಲಿ ಕಠಿಣ ಸ್ಪರ್ಧೆಯ ಸಾಧ್ಯತೆಯಿದೆ. ಲಾತೂರ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಧೀರಜ್ ದೇಶಮುಖ್ ಅವರು ಬಿಜೆಪಿಯ ರಮೇಶ್ ಕರಾಡ್ ಮತ್ತು ಎಂಎನ್ಎಸ್ ನಾಯಕ ಸಂತೋಷ್ ಗಣಪತ್ರಾವ್ ನಾಗರಗೋಜೆ ಅವರನ್ನು ಎದುರಿಸಲಿರುವ ಕಾರಣ ಲಾತೂರ್ ಗ್ರಾಮಾಂಂತರ ತೀವ್ರ ಹೋರಾಟಕ್ಕೆ ಸಾಕ್ಷಿಯಾಗಲಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!