ಪಾವತಿ ವಂಚನೆಗಳನ್ನು ನಿಭಾಯಿಸಲು ಎಐ ತಂತ್ರಜ್ಞಾನ ಬಳಕೆ

Update: 2023-08-02 14:46 GMT

Representational Image (Photo: pixabay.com)

ಆಧಾರ್ ಸಶಕ್ತ ಪಾವತಿ ವ್ಯವಸ್ಥೆ (ಎಇಪಿಎಸ್) ಸಂಬಂಧಿ ವಂಚನೆಗಳು ಹೆಚ್ಚುತ್ತಿರುವ ನಡುವೆಯೇ, ಇವುಗಳ ನಿಯಂತ್ರಣಕ್ಕೆ ಭಾರತದ ವಿಶಿಷ್ಟ ಗುರುತಿಸುವಿಕೆ ಪ್ರಾಧಿಕಾರ (ಯುಐಡಿಎಐ) ಕೃತಕ ಬುದ್ಧಿಮತ್ತೆ (ಎಐ) ಆಧರಿತ ವ್ಯವಸ್ಥೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಬೆರಳಚ್ಚು ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಬಳಸುವುದು ಇದರಲ್ಲಿ ಸೇರಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಭಗವತ್ ಕರಾಡ್ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿ, ಆಧಾರ್ ದೃಢೀಕರಣದ ಸಂದರ್ಭದಲ್ಲಿ ಬೆರಳಚ್ಚು ನಕಲು ಪಡೆಯುವ ಮೂಲಕ ಸ್ವಂತವಾಗಿ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ/ ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಆಧರಿತ ಎಫ್‍ಎಂಆರ್-ಎಫ್‍ಐಆರ್ (ಪಿಂಗರ್ ಮಿನ್ಯೂಟ್ ರೆಕಾರ್ಡ್ ಫಿಂಗರ್ ಇಮೇಜ್ ರೆಕಾರ್ಡ್) ವ್ಯವಸ್ಥೆ ಜಾರಿಗೆ ತಂದಿದೆ. ಇದು ಬೆರಳಚ್ಚಿನ ಪತ್ತೆಗೆ ನೆರವಾಗಿ ಕ್ಲೋನ್ ಮಾಡಲಾದ ಬೆರಳಚ್ಚನ್ನು ತಡೆಯಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಎನ್‍ಪಿಸಿಐ ಮುಖ ಗುರುತಿಸುವಿಕೆ ಆಧರಿತ ದೃಢೀಕರಣ ಕ್ರಮವನ್ನು ಇಂಥ ವಹಿವಾಟುಗಳುಗೆ ಆರಂಭಿಸಿತ್ತು. ಇದನ್ನು ಯುಐಎಡಿಐ ವ್ಯವಸ್ಥೆ ಕೂಡಾ ದೃಢೀಕರಣ ಸಂದರ್ಭಕ್ಕೆ ಬಳಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News