ಭತ್ತ ನಾಟಿ ಮಾಡುತ್ತಿರುವ ಸಚಿವರ ಪುತ್ರಿಯ ವಿಡಿಯೋ ವೈರಲ್

Update: 2023-07-13 14:44 GMT

ಎಂ.ಆರ್. ಮಾನ್ವಿ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಜಾಲಾತಾಣಗಳಲ್ಲಿ ಬೀನಾ ವೈದ್ಯ ಎಂಬ ಬಿ.ಕಾಂ. ವಿದ್ಯಾರ್ಥಿಯೊಬ್ಬಳ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು ಅದು ನೆಟ್ಟಿಗರಿಂದ ಪ್ರಶಂಸೆ, ಟೀಕೆ ಮತ್ತು ವಿಮರ್ಶೆಗೆ ಕಾರಣವಾಗಿದೆ.

ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್.ವೈದ್ಯರ ಪುತ್ರಿ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಸಚಿವ ಮಾಂಕಾಳ್ ರ ಏಕೈಕ ಪುತ್ರಿ ಬೀನಾ ವೈದ್ಯ ಗದ್ದೆಗಳಲ್ಲಿ ಸಾಮಾನ್ಯ ಮಹಿಳೆಯರೊಂದಿಗೆ ಸೇರಿ ಭತ್ತ ಕೃಷಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ಪ್ರಶಂಸಿದ್ದು ಮತ್ತೇ ಕೆಲವರು ಇದೊಂದು ಪ್ರಚಾರದ ಹುಚ್ಚು ಎಂದು ಬರೆದುಕೊಂಡಿದ್ದಾರೆ.

ಇತ್ತಿಚೆಗೆ ರಾಹುಲ್ ಗಾಂಧಿಯವರು ಭತ್ತನಾಟಿ ಮಾಡುವುದರ ಮೂಲಕ ದೇಶದ ಗಮನ ಸೆಳೆದಿದ್ದು ಅಂತಹದ್ದೇ ಮಾದರಿಯನ್ನು ಅನುಸರಿಸಿರುವ ಸಚಿವರ ಪುತ್ರಿ ಬೀನಾ ವೈದ್ಯ ಸಾಮಾನ್ಯ ಮಹಿಳೆರೊಂದಿಗೆ ಸೇರಿಕೊಂಡು ಗದ್ದೆ ನಾಟಿ ಮಾಡಿದ್ದಾರೆ.

ಸಚಿವರ ಮಕ್ಕಳೆಂದರೆ ಎ.ಸಿ. ಕಾರು, ಐಷಾರಾಮಿ ಜೀವನ ನಡೆಸೋ ಈಗಿನ ಕಾಲದಲ್ಲಿ ಮಹಿಳೆಯರೊಂದಿಗೆ ಗದ್ದೆಗಿಳಿದು ನಾಟಿ ಮಾಡುವುದರ ಮೂಲಕ ತಂದೆಯಂತೆ ತಾನು ಕೂಡ ಸರಳತೆಗೆ ಸಾಕ್ಷಿಯಾಗಿದ್ದಾಳೆ ಎಂದು ಸಚಿವರ ಪುತ್ರಿ ಬೀನಾ ವೈದ್ಯರನ್ನು ಕುರಿತು ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಇವತ್ತಿನ ದಿನದಲ್ಲಿ ಎಷ್ಟೋ ಜನ ಗದ್ದೆ ಕೆಲಸಕ್ಕೆ ನಾಟಿ ಮಾಡಲು ಮತ್ತು ಕೊಯ್ಲು ಮಾಡಲು ಜನ ಸಿಗದೇ ಪರದಾಟ ಮಾಡೋದು ನೋಡಿದರೆ ಈಕೆ ಎಲ್ಲರಿಗೂ ಮಾದರಿಯಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವರು ಪ್ರತಿಕ್ರಿಯಿಸಿ, ಗದ್ದೆ ನಾಟಿ ಮಾಡಿದ್ರೆ ಮಾದರಿ ಹೇಗಾಗುತ್ತಾಳೆ ಎಂದು ಟೀಕಿಸಿದ್ದಾರೆ.

ಅವರು ರಾಜಕೀಯ ಮಕ್ಕಳಾಗಲಿ, ಉದ್ಯಮಿಯ ಮಕ್ಕಳಾಗಲಿ. ಆದರೆ ರೈತರು ಮಾಡುವ ಕೆಲಸದಲ್ಲಿ ಭಾಗವಹಿಸಿದರಲ್ಲ ಅದು ಮುಖ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ.

ಸಚಿವರ ಮಗಳು ಎನ್ನುವ ಅಹಂಕಾರವಿಲ್ಲದೆ ಸ್ಥಳೀಯ ಬಡ ಮಹಿಳೆಯರೊಂದಿಗೆ ಗದ್ದೆ ನಾಟಿಗಿಳಿದ ಮೀನುಗಾರಿಕಾ ಸಚಿವ ಸನ್ಮಾನ್ಯ ಮಂಕಾಳ್ ವೈದ್ಯರವರ ಮಗಳು ಕು.ಬೀನಾ ವೈದ್ಯರವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ.

ಯಾರು ಈ ಬೀನಾ ವೈದ್ಯ?: ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ಸದ್ಯ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು ತನ್ನ ಬಿಡುವಿನ ವೇಳೆಯಲ್ಲಿ ಮನೆಯ ಪಕ್ಕದಲ್ಲಿರುವ ಗದ್ದೆಗೆ ಹೋಗಿ ನಾಟಿ ಮಾಡುವುದರ ಮೂಲಕ ತಂದೆಯಂತೆ ಪುತ್ರಿಯೂ ಕೂಡ ಸರಳತೆಗೆ ಸಾಕ್ಷಿಯಾಗಿದ್ದಾಳೆ. ಈಕೆ ವಿಧಾನಸಭಾ ಚುನಾವಣೆ ವೇಳೆಯಲ್ಲಿ ತನ್ನ ತಂದೆಗೆ ಬೆನ್ನೆಲುಬಾಗಿ ನಿಂತು ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡುವುದರ ಮೂಲಕ ತಂದೆಯ ಗೆಲುವಿಗೆ ಅಪಾರ ಶ್ರಮಪಟ್ಟಿದ್ದರು.






 





 


 



 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!