ಎಲೋರ್ಡಾ ಕಪ್: ನಿಖಾತ್, ಮೀನಾಕ್ಷಿಗೆ ಚಿನ್ನ, ಭಾರತಕ್ಕೆ 12 ಪದಕ

Update: 2024-05-18 15:50 GMT

PC : ANI 

ಹೊಸದಿಲ್ಲಿ : ಕಝಕ್‌ಸ್ತಾನದ ಅಸ್ತಾನದಲ್ಲಿ ಶನಿವಾರ ಎಲೋರ್ಡಾ ಕಪ್-2024ರಲ್ಲಿ ಹಾಲಿ ವಿಶ್ವ ಚಾಂಪಿಯನ್ ನಿಖಾತ್ ಝರೀನಾ ಹಾಗೂ ಮೀನಾಕ್ಷಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಭಾರತವು 12 ಪದಕಗಳನ್ನು ಗೆದ್ದುಕೊಂಡು ತನ್ನ ಅಭಿಯಾನ ಕೊನೆಗೊಳಿಸಿದೆ.

ನಿಖಾತ್ ಹಾಗೂ ಮೀನಾಕ್ಷಿ ಚಿನ್ನದ ಪದಕ ಜಯಿಸಿದ್ದಲ್ಲದೆ, ಭಾರತೀಯ ಬಾಕ್ಸರ್‌ಗಳು ಎರಡು ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಜಯಿಸಿದರು. ಕಳೆದ ಆವೃತ್ತಿಯಲ್ಲಿ 5 ಪದಕಗಳನ್ನು ಜಯಿಸಿದ್ದ ಭಾರತ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ.

ಈಗ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ ನಿಖಾತ್(52ಕೆಜಿ) ಕಝಕ್‌ಸ್ತಾನದ ಝಝಿರಾ ಉರಕ್ಬೇವಾರನ್ನು 5-0 ಅಂತರದಿಂದ ಮಣಿಸಿದರು. ಈ ಮೂಲಕ ಮತ್ತೊಂದು ಚಿನ್ನದ ಪದಕ ಬಾಚಿಕೊಂಡರು.

ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ರಹಮೋನೊವಾರನ್ನು 4-1 ಅಂತರದಿಂದ ಸೋಲಿಸಿರುವ ಮೀನಾಕ್ಷಿ ಸ್ಪರ್ಧಾವಳಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು.

ಇದೇ ವೇಳೆ ಅನಾಮಿಕಾ(50ಕೆಜಿ) ಹಾಗೂ ಮನೀಶಾ(60ಕೆಜಿ)ಸೋಲನ್ನು ಅನುಭವಿಸಿ ಬೆಳ್ಳಿ ಪದಕಗಳೊಂದಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದರು.

ಅನಾಮಿಕಾ ಹಾಲಿ ವಿಶ್ವ ಹಾಗೂ ಏಶ್ಯನ್ ಚಾಂಪಿಯನ್ ಚೀನಾದ ಯು ವಿರುದ್ಧ 1-4 ಅಂತರದಿಂದಲೂ, ಮನೀಶಾ ಅವರು ಕಝಕ್‌ಸ್ತಾನದ ವಿಕ್ಟೋರಿಯಾ ಗ್ರಾಫೀವಾ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ.

್‌‌‌‌‌‌

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News