ಡೇವಿಸ್ ಕಪ್: ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದ ಇಟಲಿ

Update: 2024-11-25 16:52 GMT

PC :  X \ @DavisCup

ಮಲಗ(ಸ್ಪೇನ್): ಜನ್ನಿಕ್ ಸಿನ್ನರ್ ನೇತೃತ್ವದ ಇಟಲಿ ಟೆನಿಸ್ ತಂಡ ಸತತ ಎರಡನೇ ಬಾರಿ ಡೇವಿಸ್ ಕಪ್ ಟ್ರೋಫಿಗೆ ಮುತ್ತಿಟ್ಟಿದೆ. ರವಿವಾರ ನಡೆದ ಸ್ಪರ್ಧಾವಳಿಯ ಫೈನಲ್ ಪಂದ್ಯದಲ್ಲಿ ಸಿನ್ನರ್ ಅವರು ತಲ್ಲೊನ್ ಗ್ರೀಕ್‌ಸ್ಪೂರ್‌ರನ್ನು 7-6(2), 6-2 ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಇಟಲಿ ತಂಡವು ಎದುರಾಳಿ ನೆದರ್‌ಲ್ಯಾಂಡ್ಸ್ ತಂಡವನ್ನು 2-0 ಅಂತರದಿಂದ ಮಣಿಸಿದೆ.

ಆರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ಬೊಟಿಕ್ ವಿರುದ್ಧ 6-4, 6-2 ನೇರ ಸೆಟ್‌ಗಳ ಅಂತರದಿಂದ ಜಯಶಾಲಿಯಾದ ಮ್ಯಾಟಿಯೊ ಬೆರ್ರೆಟ್ಟಿನಿ ಅವರು ಇಟಲಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.

ಝೆಕ್ ಗಣರಾಜ್ಯದ ನಂತರ ಸತತ ಎರಡು ಡೇವಿಸ್ ಕಪ್ ಗೆದ್ದ ಮೊದಲ ದೇಶವೆಂಬ ಕೀರ್ತಿಗೆ ಇಟಲಿ ಪಾತ್ರವಾಯಿತು. ಝೆಕ್ ತಂಡವು 2012 ಹಾಗೂ 2013ರಲ್ಲಿ ಈ ಸಾಧನೆ ಮಾಡಿತ್ತು.

ಇಟಲಿಯ ಮಹಿಳೆಯರ ತಂಡ ಬುಧವಾರ ಸ್ಲೋವಾಕಿಯಾ ತಂಡವನ್ನು ಸೋಲಿಸಿ ಬಿಲ್ಲಿ ಜೀನ್ ಕಿಂಗ್ ಕಪ್ ಜಯಿಸಿತ್ತು.

ಇಟಲಿಯ ಡೇವಿಸ್ ಕಪ್ ಯಶಸ್ಸಿನ ಹೆಚ್ಚಿನ ಶ್ರೇಯಸ್ಸು ನಂ.1 ರ್ಯಾಂಕಿನ ಸಿನ್ನರ್‌ಗೆ ಸಲ್ಲುತ್ತದೆ.

ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನ ತಂಡದ ವಿರುದ್ಧ ಬೆರ್ರೆಟ್ಟಿನಿ ಅವರೊಂದಿಗೆ ಡಬಲ್ಸ್ ಪಂದ್ಯದಲ್ಲಿ ಸಿನ್ನರ್ ಜಯ ಸಾಧಿಸಿದ್ದು, ಇಟಲಿ ತಂಡ 4-0 ಗೆಲುವಿನೊಂದಿಗೆ ಇಟಲಿ ತಂಡ ಸ್ಪೇನ್‌ನ ಮಲಗಾಕ್ಕೆ ಆಗಮಿಸಿತ್ತು.

ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಟೆನಿಸ್ ದಿಗ್ಗಜ ರಫೆಲ್ ನಡಾಲ್ ನಿವೃತ್ತಿಯಾಗಲು ಕಾರಣವಾಗಿದ್ದ ನೆದರ್‌ಲ್ಯಾಂಡ್ಸ್ ತಂಡವು ಇದೇ ಮೊದಲ ಬಾರಿ ಡೇವಿಸ್ ಕಪ್ ಫೈನಲ್‌ಗೆ ತಲುಪಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News