ನಾಯಕಿ ಸ್ಮೃತಿ ಮಂಧಾನ, ಪ್ರತೀಕಾ ರಾವಲ್ ಶತಕ: ಐರ್ಲೆಂಡ್ ವಿರುದ್ಧ ಭಾರತಕ್ಕೆ 304 ರನ್ ಗಳ ಭರ್ಜರಿ ಜಯ
ರಾಜ್‌ಕೋಟ್: ಮೂರನೇ ಏಕದಿನ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ (135), ಪ್ರತೀಕಾ ರಾವಲ್ (154) ಅವರ ಶತಕದ ನೆರವಿನಿಂದ ಭಾರತದ ವನಿತೆಯರು ನೀಡಿದ್ದ ಬೃಹತ್ ಮೊತ್ತವನ್ನು ಕಲೆ ಹಾಕುವಲ್ಲಿ ಐರ್ಲೆಂಡ್ ತಂಡ ವಿಫಲವಾಗಿದೆ. ಭಾರತವು ಐರ್ಲೆಂಡ್ ವಿರುದ್ಧ 304 ರನ್ ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನಾಯಕಿ ಸ್ಮೃತಿ ಮಂಧಾನ, ಪ್ರತೀಕಾ ರಾವಲ್ ಅವರ ಶತಕಗಳ ನೆರವಿನಿಂದ 435 ರನ್ ಗಳಿಸಿ ದಾಖಲೆ ಬರೆದಿತ್ತು. ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಅವರು ವೇಗದ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ಹೊಸ ದಾಖಲೆ ಬರೆದರು. ಅವರು ಕೇವಲ 70 ಎಸೆತಗಳಲ್ಲಿ ಶತಕ ಪೂರ್ಣಗೊಳಿಸದರು.
ನಾಯಕಿಗೆ ಸಾಥ್ ನೀಡಿದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು 20 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಮಿಂಚಿದರು. ರೀಚಾ ಘೋಷ್ 59, ತೇಜಲ್ ಹಸಬ್ನಿಸ್ 28, ಹರ್ಲೀನ್ ಡಿಯೋಲ್15, ಜೆಮಿಮಾ ರಾಡ್ರಿಗಸ್ 4 ಮತ್ತು ದೀಪ್ತಿ ಶರ್ಮ 11 ರನ್ ಕೊಡುಗೆಯಿಂದ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.
ಬೃಹತ್ ಗುರಿ ಬೆನ್ನಟ್ಟಲು ವಿಫಲವಾದ ಐರ್ಲೆಂಡ್ ತಂಡವು ಕೇವಲ 131 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.