ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಇಂಗ್ಲೆಂಡ್

Update: 2023-10-29 12:31 GMT

Photo : Cricketworldcup.com

ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಭಾರತ ತಂಡ 230 ರನ್ ಗುರಿ ನೀಡಿದೆ.

ಭಾರತದ ವಿರುದ್ದ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಇತ್ತ ಬ್ಯಾಟಿಂಗ್ ಬಂದ ಭಾರತ ನೀರೀಕ್ಷಿತ ಆರಂಭ ಪಡೆಯುವಲ್ಲಿ ಎಡವಿತು.ಕೇವಲ 40 ರನ್ ಗೆ ಭಾರತ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.ಭಾರತದ ಪರ ಶುಬ್ ಮನ್ ಗಿಲ್ 9 ರನ್ ಗೆ ಕ್ರಿಸ್ ವೋಕ್ಸ್ ಬೌಲಿಂಗ್ ನಲ್ಲಿ ಔಟ್ ಆದರೆ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಡೇವಿಡ್ ವಿಲ್ಲಿ ಬೌಲಿಂಗ್ ನಲ್ಲಿ ಸ್ಟೋಕ್ಸ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಶ್ರೇಯಸ್ ಐಯ್ಯರ್ 4 ರನ್ ಗಳಿಸಿದರು. ಮೂರು ವಿಕೆಟ್ ಬೇಗ ಪತನದ ನುಡುವೆಯೂ ಇಂಗ್ಲಂಡ್ ಆಕ್ರಮಣಕಾರಿ ಬೌಲಿಂಗ್ ಎದುರು ಭಾರತ ಪರ ಏಕಾಂಗಿ ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಿಸಿದ ನಾಯಕ ರೋಹಿತ್ ಶರ್ಮಾ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು ಅವರಿಗೆ ಕೆ ಎಲ್ ರಾಹುಲ್ 39 ರನ್ ಗಳಿಸಿ ಸಾಥ್ ನೀಡುವ ಪ್ರಯತ್ನ ಮಾಡಿದರಾದರೂ ಅವರು ಹೆಚ್ಚು ಸಮಯ ಕ್ರೀಸ್‌ ನಲ್ಲಿ ನಿಲ್ಲಲಿಲ್ಲ.

ನಾಯಕ ರೋಹಿತ್ ಶರ್ಮಾ 101 ಎಸೆತ ಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 87 ರನ್ ಬಾರಿಸಿ ಮಾಡುತ್ತದ್ದ ಸಂದರ್ಭ ರಶೀದ್ ಬೌಲಿಂಗ್ ನಲ್ಲಿ ದೊಡ್ಡ ಮೊತ್ತ ಪೇರಿಸಲು ಹೋಗಿ ಲಿಯಾಮ್ ಲಿವಿಂಗ್ ಸ್ಟೋನ್ ಹಿಡಿದ ಅದ್ಬುತ ಕ್ಯಾಚ್ ಗೆ ಔಟ್ ಆದರು. ರೋಹಿತ್ ವಿಕೆಟ್ ಪತನ ನಂತರ ಭಾರತಕ್ಕೆ ಹೆಚ್ಚು ರನ್ ಬರಲಿಲ್ಲ. ಬಳಿಕ ಕುಂಟುತ್ತಾ ಸಾಗಿತು.  ಆದರೆ ಬ್ಯಾಟ್‌ ಬೀಸಿದ ಸೂರ್ಯ ಕುಮಾರ್ ಯಾದವ್ ರನ್‌ ಗಳಿಕಗೆ ವೇಗ ನೀಡಿದರು. 47 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್‌ ನೊಂದಿಗೆ 49 ರನ್‌ ಗಳಿಸಿದ ಸೂರ್ಯ ಕುಮಾರ್‌ ಯಾದವ್‌ ಅರ್ಧ ಶತಕ ವಂಚಿತರಾದರು. ರವೀಂದ್ರ ಜಡೇಜಾ 8 ಮುಹಮ್ಮದ್ ಶಮಿ 1 ರನ್, ಬೂಮ್ರಾ 16 ರನ್‌ ಗಳಿಸಿ ಔಟ್‌ ಆದರು.ಕುಲ್‌ ದೀಪ್‌ ಯಾದವ್‌ 9 ರನ್‌ ಗಳಿಸಿದರು. 

ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್‌ ಪಡೆದರು. ಕ್ರಿಸ್ ವೂಕ್ಸ್, ಅದಿಲ್ ರಶೀದ್ 2 ವಿಕೆಟ್ ಪಡೆದುಕೊಂಡರೆ ಮಾರ್ಕ್ ವುಡ್ ಒಂದು ವಿಕೆಟ್ ಕಬಳಿಸಿದರು


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News