ಫುಟ್ಬಾಲ್ | ಅಫ್ಘಾನ್ ವಿರುದ್ಧದ ಪಂದ್ಯಗಳಿಗೆ ಸಂಭಾವ್ಯ ಪಟ್ಟಿ ಪ್ರಕಟ

Update: 2024-03-07 17:39 GMT

Photo: NDTV

ಹೊಸದಿಲ್ಲಿ : ಅಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಿಗಾಗಿ ಭಾರತೀಯ ಪುರುಷರ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಐಗರ್ ಸ್ಟೈಮಾಕ್ ಗುರುವಾರ 35 ಸಂಭಾವ್ಯ ಆಟಗಾರರ ಪಟ್ಟಿಯನ್ನು ಘೋಷಿಸಿದ್ದಾರೆ.

ಭಾರತವು ಅಫ್ಘಾನಿಸ್ತಾನದ ವಿರುದ್ಧ ಫಿಫಾ ವಿಶ್ವಕಪ್ 2026ರ ಎರಡನೇ ಅರ್ಹತಾ ಸುತ್ತು ಮತ್ತು ಎಎಫ್ಸಿ ಏಶ್ಯನ್ ಕಪ್ ಸೌದಿ ಅರೇಬಿಯ 2027ರ ಪ್ರಾಥಮಿಕ ಜಂಟಿ ಅರ್ಹತಾ ಪಂದ್ಯಗಳಲ್ಲಿ ಆಡಲಿದೆ.

ಭಾರತವು ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯವನ್ನು ಮಾರ್ಚ್ 21ರಂದು ಸೌದಿ ಅರೇಬಿಯದ ಅಭಾದಲ್ಲಿ ಮತ್ತು ಎರಡನೇ ಪಂದ್ಯವನ್ನು ಮಾರ್ಚ್ 26ರಂದು ಗುವಾಹಟಿಯಲ್ಲಿ ಆಡಲಿದೆ.

ಸಂಭಾವ್ಯ ಆಟಗಾರರ ಪಟ್ಟಿ

ಗೋಲ್ ಕೀಪರ್ಗಳು: ಗುರ್ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಫುರ್ಬ ಟೆಂಪ ಲಚೆಂಪ, ವಿಶಾಲ್ ಕೈತ್

ರಕ್ಷಣಾ ಆಟಗಾರರು: ಆಕಾಶ್ ಮಿಶ್ರಾ, ಲಾಲ್ಚುಂಗ್ನುಂಗ, ಮೆಹ್ತಾಬ್ ಸಿಂಗ್, ಪ್ರೀತಮ್ ಕೋಟಲ್, ರಾಹುಲ್ ಭೇಕೆ, ನಿಖಿಲ್ ಚಂದ್ರಶೇಖರ್ ಪೂಜಾರಿ, ಸುಭಾಶೀಶ್ ಬೋಸ್, ನರೇಂದರ್, ಅನ್ವರ್ ಅಲಿ, ರೋಶನ್ ಸಿಂಗ್ ನವೊರೆಮ್, ಆಮಿ ಗಣೇಶ್ ರನವಾಡೆ, ಜಯ ಗುಪ್ತ

ಮಿಡ್ ಫೀಲ್ಡರ್ಗಳು: ಅನಿರುದ್ಧ ಥಾಪ, ಬ್ರಾಂಡನ್ ಫೆರ್ನಾಂಡಿಸ್, ಲಿಸ್ಟನ್ ಕೊಲಾಸೊ, ಮಹೇಶ್ ಸಿಂಗ್ ನವೊರೆಮ್, ಸಾಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಮ್, ಜೀಕ್ಸನ್ ಸಿಂಗ್ ತೌನವೊಜಮ್, ದೀಪಕ್ ಟಂಗ್ರಿ, ಲಾಲ್ತತಂಗ ಖಾವಲ್ರಿಂಗ್, ಲಲೆಂಗ್ಮವಿಯ ರಾಲ್ತೆ, ಇಮ್ರಾನ್ ಖಾನ್

ಫಾರ್ವಡ್ಸ್: ಸುನೀಲ್ ಚೆಟ್ರಿ, ಇಶಾನ್ ಪಂಡಿತ, ಲಲ್ಲಿಯಂಝುವಲ ಛಾಂಗ್ತೆ, ಮನವೀರ್ ಸಿಂಗ್, ವಿಕ್ರಮ್ ಪ್ರತಾಪ್ ಸಿಂಗ್, ರಾಹುಲ್ ಕನ್ನೋಲಿ ಪ್ರವೀಣ್, ನಂದಕುಮಾರ್ ಶೇಖರ್, ಇಸಾಕ್ ವನಲಾಲ್ರುವಾತ್ಫೆಲ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News